ಚೆಟ್ಟಳ್ಳಿ, ಏ. ೬: ವರುಣನ ಕೃಪೆಗಾಗಿ ಮಳೆ ದೇವರೆಂದೆ ಹೆಸರುಗಳಿಸಿರುವ ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ದೇವಾಲಯದಲ್ಲಿ ಊರಿನವರು ದೇವಿಗೆ ಪ್ರಾರ್ಥನೆ ಸಲ್ಲಿಸಿದÀರು.
ಊರಿನವರು ದೇವಾಲಯದಲ್ಲಿ ವಿಘ್ನೇಶ್ವರನಿಗೆ ಕ್ಷೇತ್ರಪಾಲಕ ನಾಗದೇವರಿಗೆ ಪೂಜೆ ಸಲ್ಲಿಸಿದರು. ದೇವಾಲಯ ಸಮಿತಿಯ ಅಧ್ಯಕ್ಷ ಮುಳ್ಳಂಡ ಪ್ರಭಕಾ ತಿಮ್ಮಯ್ಯ ಊರಿನವರ ಪರವಾಗಿ ಮಳೆ ಇಲ್ಲದೆ ಸಂಕಷ್ಟ ಪರಿಸ್ಥಿತಿ ಎದುರಾಗುತಿದ್ದು, ಮಳೆ ಸುರಿದು ತಂಪೆರದು ಎಲ್ಲರನ್ನು ಕಾಪಾಡೆಂದು ಬೇಡಿಕೊಂಡರು.
ತಾ. ೧೪ ಹಾಗೂ ೧೫ ರಂದು ಚೆಟ್ಟಳ್ಳಿ ಶ್ರೀಮಂಗಲ ಭಗವತಿ ದೇವಿಯ ವಾರ್ಷಿಕ ಉತ್ಸವ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ದೇವಿಗೆ ಬೆಳ್ಳಿಯ ಕವಚವನ್ನು ಅರ್ಪಿಸುವ ಬಗ್ಗೆ ವಕೀಲ ಪುತ್ತರಿರ ನವೀನ್ ಬಿದ್ದಪ್ಪ ತಿಳಿಸಿದರು. ದೇವಾಲಯ ತಕ್ಕರಾದ ಮುಳ್ಳಂಡ ಸೋಮಣ್ಣ ದೇವಾಲಯ ಸಮಿತಿ ಪದಾಧಿಕಾರಿಗಳು ಹಾಗೂ ಊರಿನವರು ಹಾಜರಿದ್ದರು.