ನಾಪೋಕ್ಲು, ಏ. ೫: ಕೊಡವ ಕುಟುಂಬಗಳ ನಡುವಿನ ೨೩ನೆಯ ವರ್ಷದ ಕೌಟುಂಬಿಕ ಹಾಕಿ ಉತ್ಸವ ಇದೀಗ ರೋಚಕ ಘಟ್ಟಕ್ಕೆ ತಲುಪಿದೆ. ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ತಾ. ೬ರಂದು (ಇಂದು) ಜರುಗಲಿದ್ದು, ಚಾಂಪಿಯನ್ ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಹಂತಕ್ಕೆ ಕುಲ್ಲೇಟಿರ, ಪುದಿಯೊಕ್ಕಡ, ನೆಲ್ಲಮಕ್ಕಡ, ಕಂಬೀರAಡ, ಚೆಕ್ಕೇರ, ಅಮ್ಮುಣಿಚಂಡ, ಪಳಂಗAಡ ತಂಡಗಳು ಪ್ರವೇಶಿಸಿವೆ. ಕುಪ್ಪಂಡ ಹಾಗೂ ಮುರುವಂಡ ತಂಡಗಳ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯ ಮಳೆಯಿಂದಾಗಿ ಮುಂದೂಡಲ್ಪಟ್ಟಿದ್ದು, ಈ ಪಂದ್ಯ ತಾ. ೬ರಂದು (ಇಂದು) ಮುಂದುವರಿ ಯಲಿದ್ದು, ಕ್ವಾರ್ಟರ್ ಫೈನಲ್‌ಗೆ ಯಾರು ರಹದಾರಿ ಪಡೆಯಲಿದ್ದಾರೆ ಎಂದು ಕಾಯಬೇಕಿದೆ. ಪ್ರಸಕ್ತ ವರ್ಷದ ಪಂದ್ಯಾವಳಿಯಲ್ಲಿ ಕಂಬೀರAಡ ಹಾಗೂ ಅಮ್ಮುಣಿಚಂಡ ತಂಡಗಳು ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ತಲುಪಿರುವುದು ವಿಶೇಷವಾಗಿದೆ. ತಾ.೫ರ ಪಂದ್ಯಾವಳಿಯಲ್ಲಿ ಮಾಜಿ ಚಾಂಪಿಯನ್ ಕಲಿಯಂಡ ತಂಡ ಪರಾಭವಗೊಂಡಿತ್ತು. ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಇಂದು ಎರಡನೇ ಪ್ರೀಕ್ವಾರ್ಟರ್ ಫೈನಲ್ ಪಂದ್ಯ ಜರುಗಿತು.

ಫಲಿತಾಂಶ

ಕಲಿಯAಡ ಮತ್ತು ಚೆಕ್ಕೆರ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಚೆಕ್ಕೆರ ತಂಡವು ಕಲಿಯಂಡ ತಂಡವನ್ನು ೩-೨ ಗೋಲಿನ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಕಲಿಯಂಡ

(ಮೊದಲ ಪುಟದಿಂದ) ತಂಡದ ಪರ ಮಯುಕ್ತ್ ಮಾಚಯ್ಯ ಮತ್ತು ಕಾರ್ಯಪ್ಪ ತಲಾ ಒಂದೊAದು ಗೋಲು ದಾಖಲಿಸಿದರೆ, ಚೆಕ್ಕೆರ ತಂಡದ ಪರ ಬಿಶಲ್ ಎರಡು ಗೋಲು ದಾಖಲು, ಶಿವನ್ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಅಮ್ಮುಣಿಚಂಡ ಮತ್ತು ಕರಿನೆರವಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಮ್ಮುಣಿಚಂಡ ತಂಡವು ಕರಿನೆರವಂಡ ತಂಡವನ್ನು ೩-೨ ಗೋಲಿನ ಅಂತರದಿAದ ಪರಾಭವಗೊಳಿಸಿತು. ಕರಿನೆರವಂಡ ತಂಡದ ಪರ ರತನ್ ಕುಂಞಪ್ಪ, ಬಿದ್ದಪ್ಪ ತಲಾ ಒಂದೊAದು ಗೋಲು ದಾಖಲಿಸಿದರೆ, ಅಮ್ಮುಣಿಚಂಡ ತಂಡದ ಪರ ವಿಘ್ನೇಶ್ ಬೋಪಣ್ಣ, ಬೆನ್ನಿ ಬೆಳ್ಯಪ್ಪ, ಸಜನ್ ಸುಬ್ಬಯ್ಯ ತಲಾ ಒಂದೊAದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಕೊಂಗAಡ ಮತ್ತು ಪಳಂಗAಡ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಪಳಂಗAಡ ತಂಡವು ಕೊಂಗAಡ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿತು. ಪಳಂಗAಡ ತಂಡದ ಪರ ಮುತ್ತಣ್ಣ, ಪೊನ್ನಪ್ಪ ತಲಾ ಒಂದೊAದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.