ನಾಪೋಕ್ಲು, ಏ. ೬: ನಾಪೋಕ್ಲು ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆಯಲ್ಲಿ ಮಾಜಿ ಚಾಂಪಿಯನ್‌ಗಳಾದ ಪಳಂಗAಡ, ನೆಲ್ಲಮಕ್ಕಡ, ಕುಲ್ಲೇಟಿರ ಮತ್ತು ಕುಪ್ಪಂಡ (ಕೈಕೇರಿ) ತಂಡಗಳು ಸೆಮಿಫೈನಲ್ಸ್ ಪ್ರವೇಶಿಸಿವೆ.
ತಾ. ೫ ರಂದು ಮಳೆಯ ಕಾರಣದಿಂದ ಅರ್ಧಕ್ಕೆ ನಿಲ್ಲಿಸಿದ್ದ ಮುರುವಂಡ ಮತ್ತು ಕುಪ್ಪಂಡ (ಕೈಕೇರಿ) ತಂಡಗಳ ನಡುವೆ ಮೊದಲಿಗೆ ಪಂದ್ಯ ನಡೆಸಲಾಯಿತು. ಸೆಮಿಫೈನಲ್ಸ್ ಪ್ರವೇಶಿಸಿವೆ.
ತಾ. ೫ ರಂದು ಮಳೆಯ ಕಾರಣದಿಂದ ಅರ್ಧಕ್ಕೆ ನಿಲ್ಲಿಸಿದ್ದ ಮುರುವಂಡ ಮತ್ತು ಕುಪ್ಪಂಡ (ಕೈಕೇರಿ) ತಂಡಗಳ ನಡುವೆ ಮೊದಲಿಗೆ ಪಂದ್ಯ ನಡೆಸಲಾಯಿತು. ೨-೧ ಗೋಲಿನ ಅಂತರದಿAದ ಸೋಲಿಸಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿತು. ಅಮ್ಮುಣಿಚಂಡ ತಂಡದ ಪರ ವಿಘ್ನೇಶ್ ಬೋಪಣ್ಣ ಒಂದು ಗೋಲು ದಾಖಲಿಸಿದರೆ, ಪಳಂಗAಡ ತಂಡದ ಪರ ಅಜಯ್ ಮತ್ತು ಪೊನ್ನಪ್ಪ ತಲಾ ಒಂದೊAದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ನೆಲ್ಲಮಕ್ಕಡ ಮತ್ತು ಕಂಬೀರAಡ ತಂಡಗಳ ನಡುವಿನ ಪಂದ್ಯದಲ್ಲಿ ನೆಲ್ಲಮಕ್ಕಡ
(ಮೊದಲ ಪುಟದಿಂದ) ತಂಡವು ಕಂಬೀರAಡ ತಂಡವನ್ನು ೫-೧ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಕಂಬೀರAಡ ತಂಡದ ಪರ ಮಯೂರ್ ಬೋಪಯ್ಯ ಒಂದು ಗೋಲು ದಾಖಲಿಸಿದರೆ, ನೆಲ್ಲಮಕ್ಕಡ ತಂಡದ ಪರ ಸೋಮಯ್ಯ ಮೂರು, ದೇವಯ್ಯ ಮತ್ತು ಮೊಣ್ಣಪ್ಪ ತಲಾ ಒಂದೊAದು ಗೋಲು ದಾಖಲಿಸಿದರು.
ಕುಲ್ಲೇಟಿರ ಮತ್ತು ಪುದಿಯೊಕ್ಕಡ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಕುಲ್ಲೇಟಿರ ತಂಡವು ಪುದಿಯೊಕ್ಕಡ ತಂಡವನ್ನು ೩-೧ ಗೋಲುಗಳ ಅಂತರದಿAದ ಮಣಿಸಿತು. ಪುದಿಯೊಕ್ಕಡ ತಂಡದ ಪರ ಪ್ರಧಾನ್ ಒಂದು ಗೋಲು ದಾಖಲಿಸಿದರೆ, ಕುಲ್ಲೇಟಿರ ತಂಡದ ಪರ ಅವನಿಶ್ ಮಂದಪ್ಪ ಎರಡು, ಶುಭಂ ಚಿಟ್ಟಿಯಪ್ಪ ತಲಾ ಒಂದು ಗೋಲು ದಾಖಲಿಸಿದರು. ಕುಪ್ಪಂಡ (ಕೈಕೇರಿ) ಮತ್ತು ಚೆಕ್ಕೆರ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಕುಪ್ಪಂಡ ತಂಡವು ಚೆಕ್ಕೆರ ತಂಡವನ್ನು ೩-೨ ಗೋಲುಗಳ ಅಂತರದಿAದ ಸೋಲಿಸಿ ಮುನ್ನಡೆಯಿತು. ಚೆಕ್ಕೆರ ತಂಡದ ಪರ ಸೋಮಯ್ಯ ಮತ್ತು ಆದರ್ಶ್ ತಲಾ ಒಂದೊAದು ಗೋಲು ದಾಖಲಿಸಿದರೆ, ಕುಪ್ಪಂಡ ತಂಡದ ಪರ ಸೋಮಯ್ಯ ಎರಡು ಗೋಲು, ಆದರ್ಶ್ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.
-ಪಿ.ವಿ. ಪ್ರಭಾಕರ್