ಮಡಿಕೇರಿ, ಏ. ೫: ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮದ ಶ್ರೀ ಭದ್ರಕಾಳೇಶ್ವರಿ ದೇವಿಯ ವಾರ್ಷಿಕ ಉತ್ಸವ ತಾ.೭ರಿಂದ ಆರಂಭಗೊಳ್ಳಲಿದ್ದು, ತಾ.೧೭ರವರೆಗೆ ನಡೆಯಲಿದೆ.

ತಾ.೭ರಂದು ಬೆಳಿಗ್ಗೆ ೬ ಗಂಟೆಗೆ ಹಬ್ಬದ ಕಟ್ಟು ತೆಗೆಯುವದು, ೯ರಂದು ಬೆಳಿಗ್ಗೆ ೫ ಗಂಟೆಗೆ ಹೂವು ಅಕ್ಕಿ ಹಿಡಿಯುವದು, ೧೧ರಂದು ಮಧ್ಯಾಹ್ನ ೩ ಗಂಟೆಗೆ ಕೈತಲಪ್ಪ ದೇವರ ಕೊಡಿಯಾಟ, ತಾ.೧೨ರಂದು ಮಧ್ಯಾಹ್ನ ೧ಗಂಟೆಗೆ ಬೇಡು ಹಬ್ಬ ನಡೆಯಲಿದೆ. ತಾ. ೧೩ರಂದು ಮಧ್ಯಾಹ್ನ ೩ ಗಂಟೆಗೆ ಮಹಾದೇವರ ಕೊಡಿಯಾಟ, ರಾತ್ರಿ ೮ ಗಂಟೆಗೆ ಕೈತಲಪ್ಪ ದೇವರ ದೊಡ್ಡ ಹಬ್ಬ ನಡೆಯಲಿದೆ.

ತಾ.೧೫ರಂದು ಮಧ್ಯಾಹ್ನ ೨ ಗಂಟೆಗೆ ಮಹಾದೇವರ ದೊಡ್ಡ ಹಬ್ಬ ನಡೆಯಲಿದ್ದು, ತಾ.೧೬ರಂದು ಮಧ್ಯಾಹ್ನ ೧೨.೩೦ ಗಂಟೆಗೆ ಶ್ರೀ ಭದ್ರಕಾಳೇಶ್ವರಿ ದೇವಿಯ ದೊಡ್ಡ ಹಬ್ಬ ನಡೆಯಲಿದೆ. ತಾ.೧೭ರಂದು ಮಧ್ಯಾಹ್ನ ೨ ಗಂಟೆಗೆ ಸಣ್ಣಹಬ್ಬದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಲಕ್ಕಪ್ಪನ ಹರೀಶ್ ತಿಳಿಸಿದ್ದಾರೆ.