ಕುಶಾಲನಗರ, ಏ. ೬: ಕುಶಾಲನಗರ- ಕೊಪ್ಪ ಗಡಿಭಾಗದ ವಾಹನಗಳ ತಪಾಸಣಾ ಕೇಂದ್ರದಲ್ಲಿ ಸತತವಾಗಿ ಮೂರನೇ ದಿನ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ದಾಖಲೆಗಳು ಇಲ್ಲದೆ ಸಾಗಾಟ ಆಗುತ್ತಿದ್ದ ೩.೮ ಲಕ್ಷ ರೂ ಹಣವನ್ನು ಪತ್ತೆ ಹಚ್ಚಿ ಕ್ರಮ ಕೈಗೊಂಡಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಕಡೆಯಿಂದ ವ್ಯಾನ್ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಾಗಿಸುತ್ತಿದ್ದ ತಲಾ ಎರಡು ಲಕ್ಷ ರೂ.ಗಳು, ರೂ. ೯೧ ಸಾವಿರ ಮತ್ತು ರೂ. ೯೩ ಸಾವಿರ ಹಣವನ್ನು ಪತ್ತೆ ಹಚ್ಚಿದ ನಂತರ ಸಮರ್ಪಕ ದಾಖಲೆ ಗಳನ್ನು ಒದಗಿಸಿದ ಹಿನ್ನೆಲೆಯಲ್ಲಿ ಹಣ ಹಿಂತಿರುಗಿಸಲಾಗಿದೆ.

ಗುರುವಾರದಿAದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಯೋಧರನ್ನು ಗಡಿ ಭಾಗದಲ್ಲಿ ನಿಯೋಜಿಸಲಾಗಿದೆ. ನಾಲ್ಕು ಗಂಟೆಗಳಿಗೆ ತಲಾ ಎಂಟು ಮಂದಿ ಶಸ್ತçಸಜ್ಜಿತ ಯೋಧರನ್ನು ಆರು ಪಾಳಿ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸದ್ಯದಲ್ಲಿಯೇ ಕೇಂದ್ರ ಅರೆಸೇನಾ ಹಾಗೂ ಮೀಸಲು ಪಡೆಗಳ ಯೋಧರು ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊರ ಜಿಲ್ಲೆಗಳಿಂದ ಕೊಡಗು ಜಿಲ್ಲೆ ರಸ್ತೆ ಸಾರಿಗೆ ಮತ್ತು ಖಾಸಗಿ ಬಸ್ಸುಗಳ ಪ್ರಯಾಣಿಕರ ತಪಾಸಣೆಯಲ್ಲಿ ಕೂಡ ಚುನಾವಣಾ ಅಧಿಕಾರಿಗಳು ತೊಡಗಿದ್ದು ಕಟ್ಟುನಿಟ್ಟಾಗಿ ಚುನಾವಣಾ ಆಯೋಗದ ನಿಯಮವನ್ನು ಪಾಲಿಸುತ್ತಿರುವುದು ಕಂಡುಬAದಿದೆ.

ಗಡಿಭಾಗದ ವಾಹನ ತಪಾಸಣಾ ಕೇಂದ್ರಗಳಲ್ಲಿ ಚುನಾವಣಾ ಆಯೋಗದ ಮೂಲಕ ವೆಬ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸೋಮವಾರದಿಂದ ತಪಾಸಣಾ ಕೇಂದ್ರಗಳಲ್ಲಿ ಆಗುವ ಚಟುವಟಿಕೆ ಗಳನ್ನು ನಾಗರಿಕರು ವೆಬ್‌ಸೈಟ್ ಮೂಲಕ ನೇರವಾಗಿ ವೀಕ್ಷಿಸಲು ಕೂಡ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಗಡಿಭಾಗದ ವಾಹನ ತಪಾಸಣಾ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗಳ ತಂಡ ತಲಾ ೮ ಗಂಟೆಗಳಿಗೆ ದಿನದಲ್ಲಿ ಮೂರು ಪಾಳಿಯಲ್ಲಿ ವಾಹನಗಳ ತಪಾಸಣೆ ನಡೆಯುತ್ತಿದೆ.

ಶುಕ್ರವಾರ ರಜಾ ದಿನವಾಗಿದ್ದು ವಾರಾಂತ್ಯದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ವಾಹನಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಂಡು ಬಂದಿದೆ. ಈ ಕಾರಣದಿಂದ ಕುಶಾಲನಗರದ ಗಡಿಭಾಗದ ಕೇಂದ್ರಕ್ಕೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.-ಚಂದ್ರಮೋಹನ್