ವೀರಾಜಪೇಟೆ, ಏ. ೫: ಕೇರಳದಿಂದ ತಿತಿಮತಿಗೆ ಕಾರಿನಲ್ಲಿ ಗೋ ಮಾಂಸವನ್ನು ಸಾಗಿಸುತ್ತಿದ್ದ ಇಬ್ಬರನ್ನು ವೀರಾಜಪೇಟೆ ನಗರ ಠಾಣೆ ಪೊಲೀಸರು ಬಂಧಿಸಿ ಕಾರನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು-ಕೇರಳ ಹೆದ್ದಾರಿ ಪೆರುಂಬಾಡಿ ಚೆಕ್‌ಪೋಸ್ಟ್ ಬಳಿ ನಗರ ಠಾಣೆ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಸಂದರ್ಭ ವೇಗವಾಗಿ ಬಂದ ಕಾರನ್ನು ತಪಾಸಣೆ ನಡೆಸಿದಾಗ ೧೨ ಕೆ.ಜಿ. ಗೋಮಾಂಸ ಪತ್ತೆಯಾಗಿದ್ದು ಈ ಸಂಬAಧ ಕಾರಿನಲ್ಲಿದ್ದ ಹಂಸ ಮತ್ತು ರಫೀಕ್‌ನನ್ನು ಬಂಧಿಸಿ ತನಿಖೆ ನಡೆಸಿದಾಗ ಕೇರಳದಿಂದ ಗೋ ಮಾಂಸ ತಂದಿದ್ದೇವೆ ತಿತಿಮತಿ ಗ್ರಾಮದಲ್ಲಿರುವ ಮನೆಗೆ ಕೊಂಡೊಯ್ಯವುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬAಧ ಪ್ರಕರಣ ದಾಖಲಿಸಿದ ನಗರ ಠಾಣಾಧಿಕಾರಿ ಮದನ್ ಕುಮಾರ್ ಘಟನೆಗೆ ಸಂಬAಧಿಸಿದ ಕಾರನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದಾರೆ. ಡಿವೈಎಸ್‌ಪಿ ಮೋಹನ್ ಕುಮಾರ್‌ರವರ ಮಾರ್ಗದರ್ಶನದಲ್ಲಿ, ವೃತ್ತನಿರೀಕ್ಷಕ ಬಿ.ಎಸ್.ಶಿವರುದ್ರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.