ಬೆಂಗಳೂರು, ಏ. ೫: ಕಷ್ಟದ ಸಮಯದಲ್ಲಿ ನನ್ನ ಜೊತೆಗಿದ್ದರು. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ನಾನು ಬೆಂಬಲ ನೀಡುತ್ತೇನೆಂದು ನಟ ಕಿಚ್ಚ ಸುದೀಪ ಹೇಳಿದ್ದಾರೆ. ನಟ ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿಯೇ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್ ಅವರು, ಬಿಜೆಪಿ ಸೇರುವ ವಿಚಾರ ಮಾತನಾಡಲಿಲ್ಲ ಪಕ್ಷದ ಪರವಾಗಿ ಪ್ರಚಾರ ಮಾಡುವೆ ಎಂದೂ ಹೇಳಲಿಲ್ಲ. ಆದರೆ, ಬಸವರಾಜ ಬೊಮ್ಮಾಯಿ ಪರವಾಗಿ ನಿಂತುಕೊಳ್ಳುತ್ತೇನೆAದು ಹೇಳಿದ್ದಾರೆ. ಕಷ್ಟದ ದಿನಗಳಲ್ಲಿ ನನ್ನ ಜೊತೆಗೆ ನಿಂತಿದ್ದು ಸಿಎಂ ಬೊಮ್ಮಾಯಿಯವರು. ನಾನು ಚಿಕ್ಕವಯಸ್ಸಿನಿಂದ ಅವರನ್ನು ನೋಡಿದ್ದೇನೆ. ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನ ಪರ ನಿಂತಿದ್ದರು. ಅಂತಹವರು ನನ್ನ ಮಾಮ ಸಿಎಂ ಬೊಮ್ಮಾಯಿ. ನಾನು ಅವರ ಪರವಾಗಿ ನಿಲ್ಲಲು ಬಂದೆ ಎಂದು ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಣಯಗಳ ಬಗ್ಗೆ ನನಗೆ ಸಂಪೂರ್ಣ ಗೌರವವಿದೆ. ಅವರ ನಿರ್ಣಯಗಳ ಬಗ್ಗೆ ಹೆಮ್ಮ ಇದೆ. ಆದರೆ, ನಾನಿಂದು ಬಂದಿರುವುದು ರಾಜಕೀಯ ಪ್ರವೇಶ ವಿಚಾರವಾಗಿ ಅಲ್ಲ. ನಾನು ಬಂದಿರೋದು ಕೇವಲ ವ್ಯಕ್ತಿಗೋಸ್ಕರ ಅಷ್ಟೇ ಎಂದು ಸ್ಪಷ್ಟಪಡಿಸಿದರು.

ಮರು ನಾಮಕರಣ : ನಮ್ಮ ಸಾರ್ವಭೌಮತ್ವ ಎಂದ ಚೀನಾ

ಬೀಜಿಂಗ್, ಏ. ೫: ಅರುಣಾಚಲ ಪ್ರದೇಶದ ಸ್ಥಳಗಳನ್ನು ಮರುನಾಮಕರಣ ಮಾಡುವ ಚೀನಾದ ಪ್ರಯತ್ನವನ್ನು ಭಾರತ ವಿರೋಧಿಸಿದ ನಂತರ, ಈ ಪ್ರದೇಶ ತನ್ನ ಸಾರ್ವಭೌಮತ್ವ ಎಂದು ಬೀಜಿಂಗ್ ಹೇಳಿಕೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ಜಂಗ್ನಾನ್ (ಅರುಣಾಚಲ ಪ್ರದೇಶ) ಚೀನಾದ ಭೂಪ್ರದೇಶದ ಭಾಗವಾಗಿದೆ. ಜಂಗ್ನಾನ್‌ನ ಕೆಲವು ಭಾಗಗಳ ಹೆಸರುಗಳು ಚೀನಾ ಸರ್ಕಾರದ ಸಮರ್ಥ ಅಧಿಕಾರಿಗಳು ಪ್ರಮಾಣೀಕರಿಸಿದ್ದಾರೆ. ಇದು ಚೀನಾದ ಸಾರ್ವಭೌಮ ಹಕ್ಕುಗಳಲ್ಲಿದೆ ಎಂದಿದ್ದಾರೆ. ಅರುಣಾಚಲ ಪ್ರದೇಶ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಮಂಗಳವಾರ ಪ್ರತಿಪಾದಿಸಿದ್ದರು. ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡುವ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅರಿಂದಮ್ ಬಾಗ್ಚಿ, ನಾವು ಇಂತಹ ವರದಿಗಳನ್ನು ನೋಡಿದ್ದೇವೆ. ಚೀನಾ ಇಂತಹ ಪ್ರಯತ್ನವನ್ನು ಮಾಡಿದ್ದು ಇದೇ ಮೊದಲಲ್ಲ. ನಾವು ಇದನ್ನು ಸಾರಾಸಗಟಾಗಿ ತಿರಸ್ಕರಿಸುತ್ತೇವೆ ಎಂದು ಹೇಳಿದ್ದರು.

ತನಿಖಾ ಸಂಸ್ಥೆಗಳ ದುರುಪಯೋಗ : ಸುಪ್ರೀಂ ಕೋರ್ಟ್ನಲ್ಲಿ ವಿಪಕ್ಷಗಳಿಗೆ ಹಿನ್ನಡೆ

ನವದೆಹಲಿ, ಏ. ೫: ಕೇಂದ್ರ ಸರ್ಕಾರ ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡಲು, ಬೆದರಿಸಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದ ೧೪ ವಿಪಕ್ಷಗಳ ಅರ್ಜಿಗೆ ಸುಪ್ರೀಂ ಕೋರ್ಟ್ನಲ್ಲಿ ಹಿನ್ನಡೆಯುಂಟಾಗಿದೆ. ವಿಪಕ್ಷಗಳ ಪರವಾಗಿ ಅಭಿಶೇಕ್ ಮನು ಸಿಂಘ್ವಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ೨೦೧೪ ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿAದಲೂ ವಿಪಕ್ಷಗಳ ನಾಯಕರ ವಿರುದ್ಧ ದಾಖಲಾಗುವ ಜಾರಿ ನಿರ್ದೇಶನಾಲಯದ ಪ್ರಕರಣಗಳು ಹಾಗೂ ಸಿಬಿಐ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಳ ಕಂಡಿದೆ ಎಂದು ಅರ್ಜಿಯಲ್ಲಿ ಕೇಂದ್ರದ ವಿರುದ್ಧ ಆರೋಪಿಸಿದ್ದರು. ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳಲ್ಲಿ ದಾಖಲಾಗಿರುವ ಶೇ. ೯೫ ರಷ್ಟು ಪ್ರಕರಣಗಳು ದೇಶಾದ್ಯಂತ ಇರುವ ವಿಪಕ್ಷಗಳ ರಾಜಕಾರಣಿಗಳ ವಿರುದ್ಧವೇ ಆಗಿದೆ. ಇದು ರಾಜಕಾರಣಿಗಳ ವಿರುದ್ಧದ ದ್ವೇಷದ ರಾಜಕಾರಣವಾಗಿದೆ ಎಂದು ಆರೋಪಿಸಿದರು. ಆದಾಗ್ಯೂ, ಸಿಜೆಐ ಡಿ.ವೈ. ಚಂದ್ರಚೂಡ್ ಅರ್ಜಿಯ ಸಿಂಧುತ್ವ ಮತ್ತು ಕಾರ್ಯಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ತನಿಖೆ ಮತ್ತು ಕಾನೂನು ಕ್ರಮದಿಂದ ವಿರೋಧ ಪಕ್ಷಗಳಿಗೆ ವಿನಾಯಿತಿಯನ್ನು ಬಯಸುತ್ತೀರಾ ಮತ್ತು ನಾಗರಿಕರಾಗಿ ಅವರಿಗೆ ಯಾವುದೇ ವಿಶೇಷ ಹಕ್ಕುಗಳಿವೆಯೇ ಎಂದು ಸಿಂಘ್ವಿ ಅವರನ್ನು ಕೇಳಿದರು. ರಾಜಕಾರಣಿಗಳಿಗೆ ವಿಶೇಷವಾದ ಮಾರ್ಗಸೂಚಿಗಳನ್ನು ರಚಿಸಲು ಸಾಧ್ಯವಿಲ್ಲ. ಈ ಬಗ್ಗೆ ಸಂಸತ್‌ನಲ್ಲಿಯೇ ಕಳವಳ ವ್ಯಕ್ತಪಡಿಸಬಹುದು ಎಂದು ಸಿಂಘ್ವಿಗೆ ಸಿಜೆಐ ಸಲಹೆ ನೀಡಿದ್ದಾರೆ.

ಪುನೀತ್ ಕೆರೆಹಳ್ಳಿ ಹಾಗೂ ಸಹಚರರ ಬಂಧನ

ಬೆAಗಳೂರು, ಏ. ೫: ಇದ್ರೀಷ್ ಪಾಷಾ ಹತ್ಯೆ ಪ್ರಕರಣದ ಆರೋಪಿ ಗಳಾದ ಪುನೀತ್ ಕೆರೆಹಳ್ಳಿ ಹಾಗೂ ಅವರ ನಾಲ್ವರು ಸಹಚರರನ್ನು ರಾಮನಗರ ಪೊಲೀಸರು ರಾಜಸ್ಥಾನದಲ್ಲಿ ಬುಧವಾರ ಬಂಧಿಸಿದ್ದಾರೆ. ಇತ್ತೀಚೆಗೆ ಕನಪುರದ ಸಾತನೂರು ಬಳಿ ಗೋ ಸಾಗಾಟ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬAಧಿಸಿದAತೆ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಬಂಧನವಾಗಿದೆ. ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿದಂತೆ ಒಟ್ಟು ಐವರನ್ನು ರಾಜಸ್ಥಾನದಲ್ಲಿ ಬಂಧಿಸುವಲ್ಲಿ ಸಾತನೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಪ್ರಕರಣ ದಾಖಲಾಗುತ್ತಲೇ ಆರೋಪಿಗಳು ಕರ್ನಾಟಕದಿಂದ ಪರಾರಿ ಆಗಿದ್ದರು. ಒಟ್ಟು ನಾಲ್ಕು ತಂಡಗಳಾಗಿ ಜನ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಸದ್ಯ ಆರೋಪಿಗಳನ್ನು ಅಲ್ಲಿಂದ ಕರೆತರಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೆದ್ದಾರಿಗಳಲ್ಲಿ ಲ್ಯಾಂಡಿAಗ್ ಸ್ಟಿçಪ್ ಸಿದ್ಧ : ಗಡ್ಕರಿ

ನವದೆಹಲಿ, ಏ. ೫: ಮಿಲಿಟರಿ ಮೂಲಸೌಕರ್ಯವನ್ನು ಹೆಚ್ಚಿಸುವ ಪ್ರಮುಖ ಹೆಜ್ಜೆಯಾಗಿ, ರಾಷ್ಟಿçÃಯ ಹೆದ್ದಾರಿಗಳಲ್ಲಿ ೧೩ ತುರ್ತು ಲ್ಯಾಂಡಿAಗ್ ಸೌಲಭ್ಯಗಳು ಸಿದ್ಧವಾಗಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ೧೩ ತುರ್ತು ಲ್ಯಾಂಡಿAಗ್ ಸ್ಟಿçಪ್ ಸಿದ್ಧವಾಗಿದ್ದು, ಭಾರತೀಯ ವಾಯುಪಡೆಯಿಂದ ಅನುಮತಿಗಾಗಿ ಕಾಯುತ್ತಿದ್ದೇವೆ. ಒಟ್ಟು ೨೯ ಅಂತಹ ಲ್ಯಾಂಡಿAಗ್ ಸೌಲಭ್ಯಗಳನ್ನು ನಿರ್ಮಿಸಲಾಗುವುದು ಎಂದು ಗಡ್ಕರಿ ತಿಳಿಸಿದ್ದಾರೆ. ಸಾಮಾನ್ಯ ಸಂದರ್ಭಗಳಲ್ಲಿ, ಇಎಲ್‌ಎಫ್ ಅನ್ನು ಇತರ ರಾಷ್ಟಿçÃಯ ಹೆದ್ದಾರಿಯಂತೆ ಬಳಸಲಾಗುತ್ತದೆ. ಆದರೆ ತುರ್ತು ಸಂದರ್ಭಗಳಲ್ಲಿ ಐಎಎಫ್ ಅದನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಆದರೆ ಸುಗಮ ಸಂಚಾರಕ್ಕಾಗಿ ಸರ್ವೀಸ್ ರಸ್ತೆಯನ್ನು ಬಳಸಲಾಗುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಸೆಪ್ಟೆಂಬರ್ ೨೦೨೧ ರಲ್ಲಿ ಮೊದಲ ತುರ್ತು ಲ್ಯಾಂಡಿAಗ್ ಸೌಲಭ್ಯವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಗಡ್ಕರಿ ಅವರು ಉದ್ಘಾಟಿಸಿದ್ದರು. ಈ ವೇಳೆ ಈ ತುರ್ತು ಲ್ಯಾಂಡಿAಗ್ ಸ್ಟಿçಪ್ ಅನ್ನು ಯುದ್ಧದ ಸಮಯದಲ್ಲಿ ಮಾತ್ರವಲ್ಲದೆ ನೈಸರ್ಗಿಕ ವಿಕೋಪಗಳ ಸಮಯದಲ್ಲೂ ಬಳಸಬಹುದು ಎಂದು ರಾಜನಾಥ್ ಸಿಂಗ್ ಹೇಳಿದ್ದರು.

ಹಡಗು ಮುಳುಗಿ ೯ ಮಂದಿ ನಾಪತ್ತೆ

ಟರ್ಕಿ, ಏ. ೫: ಟರ್ಕಿಯ ಮೆಡಿಟರೇನಿಯನ್ ಕರಾವಳಿಯಲ್ಲಿ ೧೪ ಸಿಬ್ಬಂದಿಗಳನ್ನು ಹೊತ್ತ ಗಿನಿಯಾ-ಬಿಸ್ಸಾವ್ ಸರಕು ಸಾಗಣೆ ಹಡಗು ಬುಧವಾರ ಮುಳುಗಿದ್ದು, ೯ ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐದು ಮಂದಿಯನ್ನು ರಕ್ಷಿಸಲಾಗಿದ್ದು, ನಾಪತ್ತೆಯಾಗಿರುವ ಒಂಬತ್ತು ಮಂದಿ ಸಿಬ್ಬಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಹಡಗಿನಲ್ಲಿ ಪ್ರಯಾಣಿಸುತ್ತಿದ್ದವರು ಸಿರಿಯಾ ಪ್ರಜೆಗಳು. ಟರ್ಕಿಯ ಇಸ್ಕೆಂಡರನ್ ಬಂದರಿನಿAದ ಉಕ್ರೇನ್‌ಗೆ ತೆರಳುತ್ತಿದ್ದ ಹಡಗು ಕುಂಲ್ಲುಲಾದ ಕರಾವಳಿಯಲ್ಲಿ ಮುಳುಗಿದೆ.