ಪೊನ್ನAಪೇಟೆ, ಏ. ೫: ಪೊನ್ನಂಪೇಟೆ ಪಟ್ಟಣದ ಹೃದಯ ಭಾಗದಲ್ಲಿರುವ ಅಂಗಡಿಯೊAದರ ಬೀಗ ಮುರಿದು, ಕಳವು ಮಾಡಿದ್ದ ವ್ಯಕ್ತಿಯನ್ನು ಪೊನ್ನಂಪೇಟೆ ಅಪರಾಧ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಿಗೆ ಗ್ರಾಮದ ಎ.ಟಿ. ಶಿವು (೩೮) ಬಂಧಿತ ಆರೋಪಿ.

ಮಾ. ೧೧ ರಂದು ರಾತ್ರಿ ಪೊನ್ನಂಪೇಟೆಯ ಹಿರಿಯ ಛಾಯಾಗ್ರಾಹಕ ಎಸ್.ಎಲ್. ಶಿವಣ್ಣ ಅವರ ಅಂಗಡಿಯ ಬೀಗವನ್ನು ರಾಡ್‌ನಿಂದ ಮುರಿದು ಅಂಗಡಿಗೆ ನುಗ್ಗಿ ೨೪ ಸಾವಿರ ರೂಪಾಯಿ ಮೌಲ್ಯದ ಸಿಗರೇಟ್ ಪ್ಯಾಕೆಟ್‌ಗಳು, ೫ ಸಾವಿರ ರೂಪಾಯಿ ನಗದು ಹಾಗೂ ೨೦ ದೀಪ ಹಾಗೂ ಅಡುಗೆ ಎಣ್ಣೆ ಪ್ಯಾಕೆಟ್‌ಗಳು, ಕ್ಯಾಮರದ ಪ್ಲಾö್ಯಶ್ ಮತ್ತು ಚಾರ್ಜರ್ ಮತ್ತು ಬ್ಯಾಟರಿ ಗಳನ್ನು ಕಳವು ಮಾಡಿದ್ದ, ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದ ಪೊನ್ನಂಪೇಟೆ ಕ್ರೆöÊಂ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿ, ಆರೋಪಿ ಯಿಂದ ೫ ಸಾವಿರ ರೂಪಾಯಿ ನಗದು ಹಾಗೂ ಕಳ್ಳತನಕ್ಕೆ ಬಳಸಿಕೊಂಡಿದ್ದ ವಾಹನವನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಶಿವು ಕಳೆದ ಎರಡು ವರ್ಷಗಳ ಹಿಂದೆ ಕೂಡಿಗೆ ಡೈರಿಯಿಂದ ಪೊನ್ನಂಪೇಟೆ ಸೇರಿದಂತೆ ಕುಟ್ಟದ ವರೆಗೆ ನಂದಿನಿ ಹಾಲು ಸರಬರಾಜು ಮಾಡುವ ವಾಹನದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈತ ಈಗ ಕಳ್ಳತನ ಮಾಡಿರುವ ಅಂಗಡಿಗೂ ಹಾಲು ಸರಬರಾಜು ಮಾಡುತ್ತಿದ್ದ. ನಂತರ ದಿನಗಳಲ್ಲಿ ಆ ಕೆಲಸ ಬಿಟ್ಟಿದ್ದ. ಇತ್ತೀಚೆಗೆ ಒಂದು ಓಮಿನಿ ವಾಹನ (ಕೆ.ಎ.೦೧ ಝೆಡ್. ೯೩೬೦) ಖರೀದಿಸಿ ವಾಹನವನ್ನು ಪಾನಿಪೂರಿ ಅಂಗಡಿಯಾಗಿ ಮಾರ್ಪಡಿಸಿ, ಪಾನಿಪುರಿ ಅಂಗಡಿ ನಡೆಸುವ ಯೋಜನೆ ಹಾಕಿಕೊಂಡಿದ್ದ. ಮಾ. ೧೧ ರಂದು ಹಾಸನದಿಂದ ಓಮಿನಿ ವಾಹನ ಖರೀದಿಸಿ ತಂದ ಆರೋಪಿ ನೇರವಾಗಿ ಪೊನ್ನಂಪೇಟೆ ಶಿವಣ್ಣ ಅವರ ಅಂಗಡಿಗೆ ಬಂದು ಅಂದು ರಾತ್ರಿ ೧೦.೩೦ರ ಸಮಯದಲ್ಲಿ ಅಂಗಡಿಯ ಬೀಗ ಮುರಿದು, ಒಳಗೆ ನುಗ್ಗಿ ಕಳವು ಮಾಡಿದ್ದ.

ಮರುದಿನ ಕುಶಾಲನಗರಕ್ಕೆ ತೆರಳಿ ವರ್ಕ್ಶಾಪ್ ಒಂದರಲ್ಲಿ ತನ್ನ ಓಮಿನಿ ಗಾಡಿಯನ್ನು ಪಾನಿಪೂರಿ ಅಂಗಡಿಯಾಗಿ ಮಾರ್ಪಡಿಸಿ, ಪಾನಿಪುರಿ ವ್ಯಾಪಾರ ಮಾಡುವ ಕಾಯಕದಲ್ಲಿ ತೊಡಗಿಕೊಳ್ಳುವ ಉದ್ದೇಶಹೊಂದಿದ್ದ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ನೇತೃತ್ವದಲ್ಲಿ ವೀರಾಜಪೇಟೆ ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗೋಣಿಕೊಪ್ಪ ಸಿ.ಐ, ಪೊನ್ನಂಪೇಟೆ ಎಸ್‌ಐ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕ್ರೆöÊಂ ಸಬ್ ಇನ್ಸ್ಪೆಕ್ಟರ್ ಎಂ.ಹೆಚ್. ಆನಂದ್, ಸಿಬ್ಬಂದಿಗಳಾದ ಪ್ರಮೋದ್ ಕುಮಾರ್, ಮಹದೇಶ್ವರ ಸ್ವಾಮಿ, ಜೀವನ್, ಇನ್ನಿತರರು ಪಾಲ್ಗೊಂಡಿದ್ದರು.

-ಚನ್ನನಾಯಕ