ಶ್ರೀಮಂಗಲ, ಏ. ೫: ಪೊನ್ನಂಪೇಟೆ ತಾಲೂಕು ಬಾಡಗರಕೇರಿ ಗ್ರಾಮದ ಶತಾಯುಷಿ ಅಣ್ಣೀರ ಮುತ್ತಮ್ಮ ಚಂಗಪ್ಪ (೧೦೩) ಅವರನ್ನು ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ವತಿಯಿಂದ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭ ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಅಧ್ಯಕ್ಷ ಕೊಟ್ಟ್ ಕತ್ತೀರ ಸೋಮಣ್ಣ, ಕಾರ್ಯದರ್ಶಿ ಚೇಂದೀರ ಎಂ. ಬೋಪಣ್ಣ, ಖಜಾಂಚಿ ಐನಂಡ ಕೆ. ಮಂದಣ್ಣ, ಪ್ರಮುಖರಾದ ಕೊಳ್ಳಿಮಾಡ ಎನ್. ಕಾರ್ಯಪ್ಪ, ಮಾಚಿಮಾಡ ಲೌಲಿ ಸೋಮಯ್ಯ, ಕೇಚೆಟ್ಟೀರ ಕಾಮುಣಿ ಪೂಣಚ್ಚ, ಪೂರ್ಣಿಮಾ ಇದ್ದರು.