ಕಡಂಗ, ಏ. ೫: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ವೈಎಸ್ ಎಸ್ಎಸ್ಎಫ್ ಕಡಂಗ ಸಂಯುಕ್ತ ಆಶ್ರಯದಲ್ಲಿ ರಂಜಾನ್ ಪ್ರಯುಕ್ತ ಊರಿನ ಬಡಕುಟುಂಬಕ್ಕೆ ಆಹಾರ ಧಾನ್ಯಗಳ ಕಿಟ್ಟನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಸುಲೈಮಾನ್ ಸಿ.ಎಂ. ವಹಿಸಿದ್ದರು.
ಕಿಟ್ ವಿತರಣಾ ನೇತೃತ್ವಕ್ಕೆ ಸ್ಥಳೀಯ ಬದ್ರಿಯಾ ಮಸೀದಿಯ ಖತೀಬ್ ಶಹಜಹಾನ್ ಸಖಾಫಿ ದುಆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಎಸ್ವೈಎಸ್ ಕೋಶಾಧಿಕಾರಿ ಸಿ.ಎ. ರಜಾಕ್, ಸಂಘಟನೆ ಹಲವಾರು ಸಾಂತ್ವನ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿದ್ದು ರಂಝಾನ್ ಪ್ರಯುಕ್ತ ೫೦ ಸಾವಿರಕ್ಕೂ ಹೆಚ್ಚು ವೆಚ್ಚದ ಆಹಾರ ಧಾನ್ಯಗಳ ಕಿಟ್ಟನ್ನು ಬಡವರಿಗೆ ವಿತರಿಸಲಾಗಿದೆ ಎಂದರು.
ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಸಂಘಟನೆಯಿAದ ಹಲವಾರು ಸಾಮಾಜಿಕ ಕಾರ್ಯಕ್ರಮ ಗಳು ಹಾಗೂ ಬಡ ಕುಟುಂಬಕ್ಕೆ ಸಂಘಟನೆ ಆಸರೆಯಾಗಿದ್ದು ಇಂತಹ ಸಂಘಟನೆಯನ್ನು ಪ್ರೋತ್ಸಾಹಿಸ ಬೇಕೆಂದು ಕಿವಿಮಾತು ಹೇಳಿದರು.
ಈ ಸಂದರ್ಭ ದಾನಿಗಳಾದ ಹಾರಿಸ್ ಹಾಜಿ, ಬದ್ರಿಯಾ ಜಮಾಅತ್ ಯುಎಇ ಅಧ್ಯಕ್ಷ ಹಂಝ, ಎಸ್ವೈಎಸ್ ಶಾಖಾ ಅಧ್ಯಕ್ಷ ಅಶ್ರಫ್ ಸಿ.ಎ, ಪ್ರಧಾನ ಕಾರ್ಯದರ್ಶಿ ನೌಶಾದ್ ಸಿ.ಎಂ., ಎಸ್ಎಸ್ಎಫ್ ಪ್ರಧಾನ ಕಾರ್ಯದರ್ಶಿ ರಾಝೀಕ್, ಜೆನೀಶ್ ಕೆ.ಎನ್. ಅರ್ಫಾಜ್, ಮುರ್ಶಿದ್, ಕಬೀರ್, ಷÀಂಶುದ್ದೀನ್, ಸಲಾಂ ಪಿ.ಎ, ಸಮೀರ್ ಮತ್ತಿತರರು ಹಾಜರಿದ್ದರು.
- ನೌಫಲ್