ಮಡಿಕೇರಿ, ಏ. ೫: ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ನಗರದ ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಆಂಜನೇಯ ದೇವಾಲಯದ ಇಬ್ಬರು ಸಿಬ್ಬಂದಿಗಳಿಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ನೋಟೀಸ್ ನೀಡಿ ಉತ್ತರಿಸಲು ಸೂಚಿಸಿದೆ.
ತಾ. ೨೬ ರಂದು ನಡೆಯಲಿರುವ ದೇವಾಲಯ ವಾರ್ಷಿಕೋತ್ಸವ ಸಂಬAಧ ಪೂಜಾ ಕಾರ್ಯಕ್ರಮದ ಬಗ್ಗೆ ಅಳವಡಿಸಿರುವ ಬ್ಯಾನರ್ನಲ್ಲಿ ಭಕ್ತಾದಿಗಳಿಗೆ ಅನ್ನದಾನ ಇರುವುದಾಗಿ ದಾಖಲಿಸಲಾಗಿದೆ. ಇದು ಕಾನೂನು ಉಲ್ಲಂಘನೆ ಎಂದು ನೋಟೀಸ್ನಲ್ಲಿ ಉಲ್ಲೇಖಿಸಲಾಗಿದೆ.
೨೪ ಗಂಟೆಯೊಳಗೆ ಈ ಕುರಿತು ಸೂಕ್ತ ಸಮಜಾಹಿಷಿಕೆ ನೀಡಬೇಕು. ಉತ್ತರ ಬರದಿದ್ದಲ್ಲಿ ಸೂಕ್ತ ಕ್ರಮಕ್ಕೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ನೋಟೀಸ್ ಮೂಲಕ ಎಚ್ಚರಿಸಿದ್ದಾರೆ.
ಬ್ಯಾನರ್ನಲ್ಲಿ ಬದಲಾವಣೆ
ನೋಟೀಸ್ ಜಾರಿಯಾದ ತಕ್ಷಣ ಬ್ಯಾನರ್ನಲ್ಲಿದ್ದ ಅನ್ನದಾನ ಪದವನ್ನು ತೆಗೆದು ಪ್ರಸಾದ ವಿನಿಯೋಗವೆಂದು ಬದಲಾವಣೆ ಮಾಡಲಾಗಿದೆ. ಮಾಹಿತಿ ಕೊರತೆಯಿಂದ ಸಿಬ್ಬಂದಿಗಳು ಈ ಎಡವಟ್ಟು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜ್, ಸಂವಹನ ಅಂತರದಿAದ ಬ್ಯಾನರ್ನಲ್ಲಿ ಅನ್ನದಾನ ಎಂದು ನಮೂದಾಗಿದೆ. ತಕ್ಷಣ ಬದಲಾಯಿಸಲಾಗಿದೆ ಎಂದು ತಿಳಿಸಿದ್ದಾರೆ.