ಕೂಡಿಗೆ, ಏ. ೪: ಹಾರಂಗಿ ಮಡಿಲಲ್ಲಿ ಜಿಲ್ಲೆಯ ಮೂರನೆಯ ಸಾಕಾನೆ ಶಿಬಿರ ಆರಂಭಗೊAಡು ೮ ತಿಂಗಳುಗಳು ಕಳೆದಿವೆ. ಈಗಾಗಲೇ ವಿದ್ಯಾರ್ಥಿಗಳ ವಿವಿಧ ಹಂತಗಳ ಪರೀಕ್ಷೆಗಳು ಮುಗಿಯುವ ಸಮಯ ಹತ್ತಿರವಾಗುತ್ತಿದೆ. ಬೇಸಿಗೆ ರಜಾ ದಿನಗಳಲ್ಲಿ ಕುಟುಂಬ ಸಮೇತರಾಗಿ ವಿವಿಧ ಪ್ರವಾಸಿ ಕೇಂದ್ರಗಳಿಗೆ ಸಾರ್ವಜನಿಕರು ತೆರಳುತ್ತಾರೆ. ಹಾರಂಗಿ ಅಣೆಕಟ್ಟೆಯ ಸಮೀಪದ ಹಿನ್ನೀರಿನ ಪ್ರದೇಶದಲ್ಲಿರುವ ಜಿಲ್ಲೆಯ ಮೂರನೆಯ ಸಾಕಾನೆ ಶಿಬಿರಕ್ಕೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಕೇಂದ್ರದಲ್ಲಿರುವ ಕಲ್ಲು ಮತ್ತು ಮರದ ಬೇರುಗಳನ್ನು ಬಳಕೆ ಮಾಡಿಕೊಂಡು ವಿವಿಧ ಭಂಗಿಯ ಪ್ರಾಣಿಗಳ ಚಿತ್ರಗಳನ್ನು ನಿರ್ಮಿಸಲಾಗಿದೆ.

ಹಾರಂಗಿ ಹಿನ್ನೀರಿನ ಪ್ರದೇಶದ ವೀಕ್ಷಣೆಗೆ ಅನುಕೂಲವಾಗುವಂತೆ ವಿವಿಧ ಶೈಲಿಯ ಮರಗಳನ್ನು ಬಳಕೆ ಮಾಡಿಕೊಂಡು ಆಕರ್ಷಕ ರೀತಿಯಲ್ಲಿ ಕುಟೀರಗಳ ನಿರ್ಮಾಣ, ಜೊತೆಯಲ್ಲಿ ಸಂಜೆ ಸಮಯದಲ್ಲಿ ಸೂರ್ಯಾಸ್ತ ವೀಕ್ಷಣೆಗೂ ಅನುಕೂಲ ಮಾಡಲಾಗಿದೆ.

ನೂತನ ಸಾಕಾನೆ ಶಿಬಿರದಲ್ಲಿ ದುಬಾರೆಯಿಂದ ಸ್ಥಳಾಂತರಗೊAಡ ಏಕದಂತ, ವಿಜಯ, ರಾಮ, ಮಾರುತಿ, ಸುಬ್ರಹ್ಮಣ್ಯ, ವಿಕ್ರಮ, ಲಕ್ಷ್ಮಣ್ ಸೇರಿದಂತೆ ಏಳು ಸಾಕಾನೆಗಳಿವೆ. ದಿನಂಪ್ರತಿ ಆರು ಸಾಕಾನೆಗಳು ಕೇಂದ್ರಕ್ಕೆ ಆಗಮಿಸುವ ಪ್ರವಾಸಿಗರಿಗೆ ವೀಕ್ಷಣೆಗೆ ಲಭ್ಯವಿರುತ್ತವೆ. ಒಂದು ಆನೆಗೆ ಮದ ಬಂದಿರುವ ಹಿನ್ನೆಲೆ ಪ್ರವಾಸಿಗರ ವೀಕ್ಷಣೆಗೆ ಸಿಗುತ್ತಿಲ್ಲ ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಂ ಅವರು ಮಾಹಿತಿ ನೀಡಿದ್ದಾರೆ.

ನೂತನ ಸಾಕಾನೆ ಶಿಬಿರವು ಹಾರಂಗಿಯ ಹಿನ್ನೀರಿನ ತಟದಲ್ಲಿರುವು ದರಿಂದಾಗಿ ಪ್ರವಾಸಿಗರಿಗೆ ಅನುಕೂಲ ವಾಗುವ ದೃಷ್ಟಿಯಿಂದ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಸಂಸ್ಥೆ ವತಿಯಿಂದ ಬೋಟಿಂಗ್ ವ್ಯವಸ್ಥೆ ಮಾಡಲು ಸಂಬAಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಯತ್ನ ಮಾಡಬೇಕೆಂದು ಪ್ರವಾಸಿಗರ ಒತ್ತಾಯವಾಗಿದೆ. - ಕೆ.ಕೆ. ನಾಗರಾಜಶೆಟ್ಟಿ.