ಮಡಿಕೇರಿ, ಏ. ೩: ಪೊನ್ನಂಪೇಟೆಯ ಸಾಯಿ ಶಂಕರ್ ಬಿ.ಎಡ್ ಕಾಲೇಜಿಗೆ ೨೦೨೩ರ ಫೆಬ್ರವರಿಯಲ್ಲಿ ಬಿ.ಎಡ್ ೪ನೇ ಸೆಮಿಸ್ಟರ್ಗೆ ನಡೆದ ಪರೀಕ್ಷೆಯಲ್ಲಿ ಪರೀಕ್ಷೆ ಬರೆದ ೪೭ ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಶೇ. ೧೦೦ ಫಲಿತಾಂಶ ಬಂದಿದೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಾಯಿ ಶಂಕರ್ ಬಿ.ಎಡ್ ಕಾಲೇಜು ಪೊನ್ನಂಪೇಟೆಯ ದೂರ ಶಿಕ್ಷಣ ಕೇಂದ್ರದಿAದ ೨೦೨೨ರ ನವೆಂಬರ್ನಲ್ಲಿ ನಡೆದ ಪರೀಕ್ಷೆಯಲ್ಲಿ ಪರೀಕ್ಷೆ ಬರೆದ ೪೯ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು, ಸಂಸ್ಥೆಗೆ ಶೇ. ೧೦೦ ಫಲಿತಾಂಶ ಬಂದಿದೆ.