ಮಡಿಕೇರಿ, ಏ. ೩: ತಾಲೂಕಿನ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಡೋತ್‌ಮೊಟ್ಟೆ ಗ್ರಾಮದ ಬೆಟ್ಟದಲ್ಲಿ ರಾತ್ರಿ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ೨ ರಿಂದ ೩ ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

(ಮೊದಲ ಪುಟದಿಂದ) ರಾತ್ರಿ ೮ ಗಂಟೆ ಸುಮಾರಿಗೆ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತ ಬೆಂಕಿಯ ತೀವ್ರತೆ ಹೆಚ್ಚಾಗ ತೊಡಗಿದೆ. ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ವಾಹನ ಸಹಿತ ಅಗ್ನಿಶಾಮಕ ಸಿಬ್ಬಂದಿಗಳು ತೆರಳಿ ಕತ್ತಲ ನಡುವೆ ಸ್ಥಳೀಯರ ಸಹಾಯದೊಂದಿಗೆ ಜಲಪಿರಂಗಿ ಪ್ರಯೋಗಿಸಿ ಬೆಂಕಿ ನಂದಿಸಲು ಮುಂದಾದರು. ಅಗ್ನಿ ದುರಂತದಿAದ ಅಪಾರ ಪ್ರಮಾಣದ ಗಿಡ ಮರಗಳು ನಾಶವಾಗಿವೆ. ಬೀಡಿ ಅಥವಾ ಸಿಗರೇಟ್ ಕಿಡಿಯಿಂದ ಅನಾಹುತ ಸಂಭವಿಸಿರ ಬಹುದು ಎಂದು ಅಂದಾಜಿಸಲಾಗಿದೆ. ಲೀಡಿಂಗ್ ಫೈಯರ್‌ಮೆನ್ ಚೀಯಣ್ಣ ನೇತೃತ್ವದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಸಿಬ್ಬಂದಿಗಳಾದ ಬರ್ಮ, ಆನಂದ, ಶಿವರಾಜ್, ಅರುಣ್, ಚಾಲಕ ಶಾಹಿದ್ ಇದ್ದರು.