ಮಡಿಕೇರಿ, ಏ. ೩: ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದು ರಾಜ್ಯಮಟ್ಟ, ರಾಷ್ಟç ಮಟ್ಟ ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಈಗಾಗಲೇ ಸಾಬೀತಾಗಿದೆ ಎಂದು ಗೋಣಿಕೊಪ್ಪಲಿನ ಮಹಿಳಾ ಉದ್ಯಮಿ ಎಂ.ಕೆ ಸಂಧ್ಯಾ ಕಾಮತ್ ನುಡಿದರು. ಅವರು ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದಿAದ ಮಡಿಕೇರಿಯ ಪತ್ರಿಕಾ ಭವನದ ಸಭಾಂಗಣದಲ್ಲಿ ಏರ್ಪಡಿಸಿದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತಿದ್ದರು.
ಗಂಡ ಹೆಂಡತಿ ಕುಟುಂಬದ ಕಣ್ಣುಗಳಿದ್ದಂತೆ. ಸಬಲರಾಗುವ ನಿಟ್ಟಿನಲ್ಲಿ ಮೇಲು-ಕೀಳು ಭಾವನೆ ಬಾರದಂತೆ ಗಮನಿಸಿಕೊಂಡು ಹೋದಲ್ಲಿ ಕುಟುಂಬ ವ್ಯವಸ್ಥೆಯಲ್ಲಿ ನಾವು ಸಫಲರಾಗಬಹುದು ಮತ್ತು ನೆಮ್ಮದಿಯ ಜೀವನ ಕಾಣಬಹುದು. ಸಬಲರಾಗುವ ನಿಟ್ಟಿನಲ್ಲಿ ಇಂದು ನಾವು ಹಲವಾರು ಕೌಟುಂಬಿಕ ಸಮಸ್ಯೆಗಳನ್ನು ವೈಮನಸ್ಸುಗಳನ್ನು, ವಿಚ್ಛೇದನಗಳನ್ನು ಕಾಣುತ್ತಿದ್ದೇವೆ. ಸಕಾರಾತ್ಮಕ ಚಿಂತನೆಯಿAದ ಇವೆಲ್ಲವನ್ನೂ ಮೀರಿ ನಿಂತು ಹೆಣ್ಣು ಸಬಲಳಾಗಿ ಕೌಟುಂಬಿಕ ವ್ಯವಸ್ಥೆಯನ್ನು ಸರಿ ಮಾಡಿಕೊಂಡು ಹೋಗುವ ನಿಟ್ಟಿನಲ್ಲಿ ಚಿಂತನೆಯ ಅಗತ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ದೃಢಸಂಕಲ್ಪ ಮತ್ತು ನಿಸ್ವಾರ್ಥ ಸೇವೆ ಯಾವುದೇ ವ್ಯಕ್ತಿಯನ್ನು ಸಾಧನೆಯಡೆಗೆ ಕರೆದುಕೊಂಡು ಹೋಗುತ್ತದೆ ಎಂದು ತಮ್ಮ ಅನುಭವಗಳನ್ನು ಹಂಚಿಕೊAಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಶ್ರೀಮತಿ ಶೋಭಾ ಸುಬ್ಬಯ್ಯ ನವರು ಮಾತನಾಡಿ, ಮಹಿಳೆ ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗಬೇಕು. ಪ್ರತಿಯೊಂದು ಅವಕಾಶವನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಮೇಲೆ ಏರಬೇಕು, ಸಾಧನೆಯ ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದರು. ರೇವತಿ ರಮೇಶ್ ಮತ್ತು ಲಲಿತ ಕಟ್ರತನ ತಂಡದಿAದ ಕಿರು ನಾಟಕ ಪ್ರದರ್ಶನಗೊಂಡಿತು. ಅಂಬೆಕಲ್ ಸುಶೀಲ ಕುಶಾಲಪ್ಪ, ಕಡ್ಲೆರ ತುಳಸಿ ಮೋಹನ್ ರವರು ಜಾನಪದ ಗೀತೆ ಹಾಡಿದರು. ಸುಂದರಿಮಾಚಯ್ಯ ರವರು ಪದ್ಮಶ್ರೀ ರಾಣಿ ಮಾಚಯ್ಯ ರವರ ಕುರಿತು ತಾವು ರಚಿಸಿದ ಕವನವನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಮಹಿಳಾ ಬರಹಗಾರರ ಸಂಘದ ಉಪಾಧ್ಯಕ್ಷೆ ಬೇಬಿ ಚಿಣ್ಣಪ್ಪ, ಕಾರ್ಯದರ್ಶಿ ರೇವತಿ ರಮೇಶ್, ಕೋಶಾಧಿಕಾರಿ ಲಲಿತ ತಿಮ್ಮಯ್ಯ, ಮಾಜಿ ಅಧ್ಯಕ್ಷೆ ಕಸ್ತೂರಿ ಗೋವಿಂದಮಯ್ಯ, ಸದಸ್ಯರುಗಳಾದ ಚೊಕ್ಕಾಡಿ ಪ್ರೇಮ ರಾಘವಯ್ಯ, ಸುನೀತಾ ಪ್ರೀತು, ಅರುಣಾ ಮೈಸೂರು, ಕೊಡಗು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ ತೆನ್ನೀರ ರಾಧ ಪೊನ್ನಪ್ಪ ಕಾರ್ಯಕ್ರಮ ನಿರ್ವಹಣೆ ಮಾಡಿದರು.