ಮಡಿಕೇರಿ, ಏ. ೩: ವರುಣನ ಕೃಪೆಗಾಗಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಭಕ್ತಜನ ಸಂಘದ ವತಿಯಿಂದ ತಾ. ೭ರಂದು ಪರ್ಜನ್ಯ ಹೋಮ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ ೭ರಿಂದ ೮ ಗಂಟೆ ತನಕ ಅಭಿಷೇಕ ಪೂಜೆ, ಬೆಳಿಗ್ಗೆ ೮ರಿಂದ ೧೨ರ ತನಕ ಪರ್ಜನ್ಯ ಹೋಮ, ಮಧ್ಯಾಹ್ನ ೧೨.೩೦ಕ್ಕೆ ನಿತ್ಯ ಮಹಾಪೂಜೆ ನಡೆಯಲಿದೆ.

ಈ ಸಂದರ್ಭದಲ್ಲಿ ನಾಡಿನ ಸುಭಿಕ್ಷೆಗಾಗಿ, ಮಳೆ-ಬೆಳೆಗಳ ವರದಾತ, ಶ್ರೀ ಈಶ್ವರ ಇಗ್ಗುತ್ತಪ್ಪ ದೇವರಿಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರಿAದ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗಿದೆ. ದೇವಾಲಯಕ್ಕೆ ಒಳಪಟ್ಟ ಪಾಡಿನಾಡಿನ ಎಲ್ಲಾ ತಕ್ಕಮುಖ್ಯಸ್ಥರು, ಭಕ್ತಜನ ಸಂಘದ ಪದಾಧಿಕಾರಿಗಳು, ಕೊಡಗಿನ ಭಕ್ತ ಮಹಾಜನರೆಲ್ಲರೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಪ್ರಾರ್ಥನೆಯಲ್ಲಿ ಭಾಗವಹಿಸಲು ದೇವಾಲಯ ಪ್ರಮುಖರು ಕೋರಿದ್ದಾರೆ.