ಮಡಿಕೇರಿ, ಏ. ೪: ಮಡಿಕೇರಿ ನಗರ ಜ್ಞಾನದೀಪ ದೈವಜ್ಞ ಬ್ರಾಹ್ಮಣ ಮಹಿಳಾ ಸಂಘದ ಅಧ್ಯಕೆÀ್ಷ ಗೀತಾ ಸುಬ್ರಮಣ್ಯ ಅವರ ಮುಂದಾಳತ್ವದಲ್ಲಿ ನಗರಸಭೆ ಆಡಳಿತಕ್ಕೊಳಪಡುವ ಮೂರು ಶಾಲೆಗಳ ಮಕ್ಕಳಿಗೆ ಕಾರ್ಡ್ ಬೋರ್ಡ್, ಪೌಚ್, ಪುಸ್ತಕಗಳನ್ನು ವಿತರಿಸಲಾಯಿತು. ಗೀತಾ ಸುಬ್ರಮಣ್ಯ ಅವರು ಮಕ್ಕಳಿಗೆ ಪರೀಕ್ಷೆಯನ್ನು ಚೆನ್ನಾಗಿ ಎದುರಿಸಿ ಉತ್ತಮ ಪ್ರಜೆಗಳಾಗಿ ಬಾಳಬೇಕೆಂದು ಹೇಳಿದರು. ಮಾಜಿ ಅಧ್ಯಕೆÀ್ಷ ಗೀತಾ ಮಧುಕರ ಅವರು ಮಕ್ಕಳಿಗೆ ವಿದ್ಯೆಗೆ ಹೆಚ್ಚಿನ ಒತ್ತುನೀಡಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಹುರಿದುಂಬಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸುವರ್ಣ ಮಲ್ಲೇಶ್, ಖಜಾಂಚಿ ಶುಭ ವಿಶ್ವನಾಥ್. ಆಡಳಿತ ಮಂಡಳಿ ಸದಸ್ಯರಾದ ಸೀತಾ ಪ್ರಕಾಶ್, ಮೀರಾ ನಾಗಪ್ಪ, ಸವಿತಾ ರಾಕೇಶ್, ಹೇಮಾ ಈಶ್ವರ, ಮಾಲಾ ರೋಶನ್, ವಿಜಯ ಸತೀಶ್, ಸವಿತ ಅರುಣ್, ರೂಪ ಪ್ರಶಾಂತ್, ಪ್ರಿಯಾ ಕಿರಣ್ ಭಾಗವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯನಿ ಸ್ವಾಗತಿಸಿ, ವಂದಿಸಿದರು. ಸಂಘವು ಮುಂದಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಖಜಾಂಚಿ ಶುಭ ವಿಶ್ವನಾಥ್ ಮಾಹಿತಿ ನೀಡಿದರು.