ಚೆಯ್ಯಂಡಾಣೆ, ಏ. ೩: ಕಳೆದ ಹಲವಾರು ವರ್ಷಗಳಿಂದ ವೀರಾಜಪೇಟೆ, ಕೆದಮುಳ್ಳೂರು, ಕಡಂಗ, ಎಡಪಾಲ ಮಾರ್ಗವಾಗಿ ನಾಪೋಕ್ಲುವಿಗೆ ಬೆಳಿಗ್ಗೆ ಹಾಗೂ ಸಂಜೆ ಸಂಚರಿಸುವ ಸರಕಾರಿ ಬಸ್ ೨ ವಾರಗಳಿಂದ ಸಂಚರಿಸುತ್ತಿಲ್ಲ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆ ಕೂಡ ನಡೆಯುತ್ತಿದೆ. ದಿನನಿತ್ಯ ಇದೇ ಬಸ್‌ನಲ್ಲಿ ಸಂಚರಿಸುವ ಸರಕಾರಿ ಹಾಗೂ ಖಾಸಗಿ ಕೆಲಸಕ್ಕೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಸರಕಾರಿ ಬಸ್ ಸೇವೆ ಒದಗಿಸಿ ಗ್ರಾಮಸ್ಥರ ತೊಂದರೆಯನ್ನು ನೀಗಿಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.