ಕೂಡಿಗೆ, ಏ. ೩: ದೆಹಲಿಯಲ್ಲಿ ಕರ್ನಾಟಕ ಕನ್ನಡ ಸಂಘದ ಅಮೃತ ಮಹೋತ್ಸವದ ಅಂಗವಾಗಿ ನಡೆದ "ಬಾರಿಸು ಕನ್ನಡ ಡಿಂಡಿಮ" ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಶಾಲನಗರ ಕುಂದನ ನೃತ್ಯಾಲಯದ ಮಕ್ಕಳು ಪ್ರದರ್ಶಿಸಿದ ನೃತ್ಯ ಪ್ರದರ್ಶನ ಗಮನ ಸೆಳೆಯಿತು.
ನೃತ್ಯ ವಿದುಷಿ ವಿನುತ ಹೇಮಂತ್ ನೇತೃತ್ವದಲ್ಲಿ ಈಚೆಗೆ ಪ್ರದರ್ಶಿಸಿದ "ಕೊಡಗಿನ ಸಂಭ್ರಮ" ಎಂಬ ನೃತ್ಯ ರೂಪಕವು ದೆಹಲಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಕಲಾ ವೈಭವದ ಬಗ್ಗೆ ಶ್ಲಾಘಿಸಿದರು.
ರಶ್ಮಿ, ಮೋನಿಕ, ಸ್ಪಂದನ, ತನಿಷ, ಡಿ.ಎಚ್.ಖುಷಿ, ಆಲಿಯ, ನಿಷ್ಮಯ್, ತಸ್ಮಿ, ಧನ್ಯಶ್ರೀ, ಪ್ರಗನ್ಯ, ದಿಯಾ, ಸವಿತ, ಲಕ್ಷ್ಮಿ, ಯಶಸ್ವಿನಿ ಸೇರಿದಂತೆ ಇತರೆ ನೃತ್ಯಪಟುಗಳು ಭಾಗವಹಿಸಿದ್ದರು.