ಕಣಿವೆ, ಏ. ೩: ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಶುಂಠಿ ಕೃಷಿಕೈಗೊಳ್ಳಲು ಇಡೀ ಭೂಮಂಡಲ ನೆಲಸಮಗೊಳ್ಳುತ್ತಿದೆ.

ಒಮ್ಮೆ ಶುಂಠಿ ಬೆಳೆದ ಜಾಗದಲ್ಲಿ ಕನಿಷ್ಟ ಆರೇಳು ವರ್ಷ ಮತ್ತದೇ ಶುಂಠಿ ಬೆಳೆ ಬೆಳೆಯಲು ಸಾಧ್ಯವಾಗದ ಕಾರಣ ಬಂಡವಾಳ ಶಾಹಿ ಕೃಷಿಕರು ಪ್ರತಿ ವರ್ಷವೂ ಹೊಸ ಹೊಸ ಜಾಗದ ಹುಡುಕಾಟದಲ್ಲಿ ನಿರತರಾಗುತ್ತಿದ್ದು, ಭೂ ಮಾಲೀಕರನ್ನು ಪ್ರಚೋದಿಸಿ ಅವರ ಮಾಲೀಕತ್ವದ ಗುಡ್ಡಗಳು, ಗದ್ದೆಗಳು, ದಿಣ್ಣೆಗಳು, ತೋಟಗಳು ಅಷ್ಟೇ ಏಕೆ ಗೋವುಗಳು ಹುಲ್ಲು ಮೇಯಲು ಸೀಮಿತವಾಗಿದ್ದ ಗೋಮಾಳಗಳನ್ನು ಕೂಡ ನೆಲಸಮ ಮಾಡಲಾಗುತ್ತಿದೆ.

ಶುಂಠಿ ಬೆಳೆಯಲು ಭೂಮಿ ಒಂದಷ್ಟು ಇಳಿಮುಖವಾಗಿರಬೇಕು. ಹಾಗೂ ಆ ಭೂಮಿಯೊಳಗೆ ಗಿಡ-ಮರಗಳು ಅಷ್ಟಾಗಿ ಇರುವಂತಿಲ್ಲ. ಹಾಗಾಗಿ ಎಲ್ಲವನ್ನು ನೆಲಸಮ ಮಾಡಿ ಭೂಮಿಯನ್ನು ಅಚ್ಚುಕಟ್ಟುಗೊಳಿಸಿ ಕೃಷಿ ಮಾಡಲಾಗುತ್ತದೆ.

ಫಲವತ್ತತೆಗಾಗಿ ಪರದಾಟ

ಶುಂಠಿ ಬೆಳೆಯಲು ಸಿದ್ಧಗೊಳಿಸಿದ ಭೂಮಿಯ ಮಣ್ಣು ಫಲವತ್ತತೆಯಿಂದ ಇರಬೇಕೆಂಬ ಉದ್ದೇಶದಿಂದ ಗೋಮಾಳ ಹಾಗೂ ಗುಡ್ಡಗಳ ಮೇಲಿನ ಮಣ್ಣಿನಲ್ಲಿ ಫಲವತ್ತತೆಯ ಸಾರ ಹೆಚ್ಚಾಗಿ ಇರುವ ಕಾರಣ ಅಂತಹ ಭೂಮಿಯನ್ನು ಹುಡುಕಿ ಹದ ಮಾಡಿ ಶುಂಠಿ ಬೆಳೆಯಲಾಗುತ್ತದೆ.

ಮಣ್ಣು ಫಲವತ್ತತೆಯಿಂದ ಇದ್ದಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಗಿ ಬೇಕಾಗುವುದಿಲ್ಲ. ಇಳುವರಿಯು ಅಧಿಕವಾಗಿರುತ್ತದೆ. ಯಥೇಚ್ಛ ಪ್ರಮಾಣದಲ್ಲಿ ವೆಚ್ಚ ಮಾಡಿ ಬೆಳೆಯುವ ಶುಂಠಿ ಕೃಷಿಯಲ್ಲಿ ಲಾಭದಾಯಕಗೊಳಿಸಲು ಕೆಲವು ಬಂಡವಾಳ ಶಾಹಿ ಕೃಷಿಕರು ಭಾರೀ ಪ್ರಮಾಣದ ಮಣ್ಣು ಅಗೆಯುವ ಯಂತ್ರಗಳನ್ನು ತಂದು ಭೂಮಿಯ ಮೇಲ್ಮೆöÊಯಿಂದ ಎರಡರಿಂದ ಮೂರು ಅಡಿಗಳ ಕೆಳಗಿರುವ ಮಣ್ಣನ್ನು ಇಟಾಚಿಯಿಂದ ಮೇಲೆ ಬಗೆದು ತೆಗೆದು ಭೂಮಿಯನ್ನು ಉಳುಮೆಗೆ ಸಿದ್ಧಗೊಳಿಸುತ್ತಿದ್ದಾರೆ.

ಭತ್ತದ ಒಣ ಹುಲ್ಲಿಗೂ ಬೇಡಿಕೆ

ಕಳೆದ ಕೆಲವು ವರ್ಷಗಳ ಮೊದಲು ಬೆಳೆಯ ಇಳುವರಿಗಿಂತ ಖರ್ಚು ಹೆಚ್ಚಾಗಿ ಬರುವ ಕಾರಣಕ್ಕೆ ಗದ್ದೆಗಳಲ್ಲಿ ಭತ್ತದ ಕೃಷಿ ಮಾಡಲು ಕೃಷಿಕರು ಹಿಂದೇಟು ಹಾಕುತ್ತಿದ್ದರು. ಆದರೆ ದಶಕಗಳ ಈಚೆಗೆ ಶುಂಠಿ ಮೇನಿಯ ಹಳ್ಳಿ ಹಳ್ಳಿಗಳಿಗೂ ಅಡಿಯಿಟ್ಟಿದ್ದ ಪ್ರತಿಯೊಬ್ಬರೂ ಶುಂಠಿ ಕೃಷಿ ಮಾಡಲು ಮುಂದಾಗುವ ಕಾರಣ ಬಿತ್ತನೆ ಮಾಡುವಾಗ ಬಿಸಿಲಿನ ತಾಪಕ್ಕೆ ಬಿತ್ತನೆ ಬೀಜದ ಮೊಳಕೆಗೆ ಹಾನಿಯಾಗಬಾರದು ಎಂದು ಭತ್ತದ ಒಣ ಹುಲ್ಲನ್ನು ತಂದು ಶುಂಠಿ ಬಿತ್ತನೆಯ ಪಟಗಳ ಮೇಲೆ ಮುಚ್ಚಿ ಅದರ ಮೇಲೆ ನೀರನ್ನು ಹರಿಸಲಾಗುತ್ತದೆ.

ಕಳೆದ ಹಲವು ವರ್ಷಗಳ ಹಿಂದೆ ಭತ್ತದ ಹುಲ್ಲಿನ ನಾಲ್ಕು ಕೆ.ಜಿ ತೂಕದ ಕಟ್ಟು ಒಂದಕ್ಕೆ ಹತ್ತು ರೂ ಇದ್ದದ್ದು ಇದೀಗ ದಿಢೀರನೇ ೩೦ ರಿಂದ ೪೦ ರೂಗಳಿಗೆ ಏರಿಕೆಯಾಗಿದೆ.

ಭತ್ತ ಬೆಳೆಯುವ ರೈತರಿಗೆ ಭತ್ತದ ಫಸಲಿಗಿಂತ ಭತ್ತದ ಒಣ ಹುಲ್ಲಿನಿಂದಲೇ ಹೆಚ್ಚು ಲಾಭವಾಗುತ್ತಿದೆ. ಹಾಗಾಗಿ ಇದೀಗ ಭತ್ತ ಬೆಳೆಯಲೂ ರೈತರು ಉತ್ಸುಕರಾಗುತ್ತಿದ್ದಾರೆ.

ಸಗಣಿ ಗೊಬ್ಬರಕ್ಕೆ ಬೇಡಿಕೆ

ಹಳ್ಳಿಗಾಡು ಪ್ರದೇಶಗಳಲ್ಲಿ ಸಾಮಾನ್ಯವಾಗಿ ರೈತರು ಸಾಕುವ ದನ, ಎಮ್ಮೆ ರಾಸುಗಳ ಸಂಗ್ರಹಿತ ಸಗಣಿ ಗೊಬ್ಬರವನ್ನು ವರ್ಷಗಟ್ಟಲೇ ರಾಶಿ ಹಾಕಿ ಅದರೊಳಗಿಂದಷ್ಟು ಹುಲ್ಲು, ಸೊಪ್ಪು, ಕಸ ಕಡ್ಡಿಗಳ ಸಾವಯವ ಕಚ್ಚಾ ವಸ್ತುಗಳನ್ನು ಸೇರಿಸಿ ಉತ್ಪಾದಿಸಿ ಇಡುವ ಸಾವಯವ ಗೊಬ್ಬರಕ್ಕೆ ಭಾರೀ ಬೇಡಿಕೆ ಇದೆ. ಶುಂಠಿ ಕೃಷಿಕರು ಶುಂಠಿ ಬಿತ್ತನೆಗೂ ಮುನ್ನಾ ಭೂಮಿಯನ್ನು ಹದ ಮಾಡುವಾಗ ಸಾವಯವ ಗೊಬ್ಬರ ಸೇರಿಸಿ ಉಳುಮೆ ಮಾಡಿ ಶುಂಠಿ ಬೆಳೆಗೆ ಫಲವತ್ತತೆಯ ಸಾರವನ್ನು ನೀಡುವ ಕಾರಣ ಸಗಣಿ ಗೊಬ್ಬರಕ್ಕೆ ಇನ್ನಿಲ್ಲದ ಬೇಡಿಕೆ ಇದೆ. ಇದೀಗ ಒಂದು ಟ್ರಾಕ್ಟರ್ ಸಗಣಿ ಸಾವಯವ ಗೊಬ್ಬರಕ್ಕೆ ೪ ರಿಂದ ೪೫೦೦ ರೂ ಇದೆ.

ಕೆಲವು ರೈತರು ತಮ್ಮ ಮನೆಯಂಗಳದಲ್ಲಿ ಕೇವಲ ಸಗಣಿಯಂತಹ ಸಾವಯವ ಗೊಬ್ಬರ ತಯಾರಿಸಿಕೊಂಡು ಶುಂಠಿ ಬೆಳೆಗಾರರಿಗೆ ಮಾರಾಟ ಮಾಡುವ ಮೂಲಕವೂ ಹೆಚ್ಚು ಲಾಭ ಮಾಡುತ್ತಿದ್ದಾರೆ.

ಕೆಲವು ಕೃಷಿಕರಂತೂ ತಾವು ವರ್ಷವಿಡೀ ಉಪಯೋಗಿಸಲು ಬೆಳೆವ ಭತ್ತದ ಗದ್ದೆಗಳಿಗೆ ಸಗಣಿ ಗೊಬ್ಬರ ಹಾಕದೇ ಹಣದಾಸೆಗೆ ಒಳಗಾಗಿ ಸಗಣಿ ಗೊಬ್ಬರ ಮಾರಾಟ ಮಾಡಿ ರಾಸಾಯನಿಕ ಗೊಬ್ಬರ ತಂದು ಗದ್ದೆಗಳಿಗೆ ಹಾಕಿ ಭತ್ತ ಬೆಳೆಯುವತ್ತ ಮಗ್ನರಾಗುತ್ತಿದ್ದಾರೆ. ಈ ಬಗ್ಗೆ ಆಯಾಯ ವ್ಯಾಪ್ತಿಯ ಕೃಷಿ ಅಧಿಕಾರಿಗಳು ಕೃಷಿಕರಿಗೆ ಸೂಕ್ತ ಮಾಹಿತಿ ಕೊಡುವುದು ಒಳಿತು.

ಶುಂಠಿಯಿAದಾಗಿ ಹಸಿರು ಕ್ರಾಂತಿ

ಶುAಠಿ ಕೃಷಿಯಿಂದಾಗಿ ಮಣ್ಣಿನ ಸಾರ ಹೋಯಿತು. ಭೂಮಿ ಬರಡಾಯಿತು ಎಂದೆಲ್ಲಾ ವಾದಿಸುವವರು ಇದ್ದಾರೆ. ಆದರೆ ಶುಂಠಿ ಕೃಷಿಯಿಂದ ಮಣ್ಣಿನ ಫಲವತ್ತತೆಯ ಸಾರ ಹೆಚ್ಚುತ್ತದೆ. ಬೆಳೆದ ಶುಂಠಿ ಫಸಲು ರೋಗ ಪೀಡಿತಗೊಂಡರೆ ಅದರ ಹತೋಟಿಗೆ ಅಳವಡಿಸುವ ರಾಸಾಯನಿಕ ಹೊರತುಪಡಿಸಿ ಉತ್ತಮವಾದ ಬೆಳೆ ಬಂದ ಶುಂಠಿ ಫಸಲಿಗೆ ರಾಸಾಯನಿಕಗಳ ಬಳಕೆ ಅಷ್ಟಕ್ಕಷ್ಟೆ. ವಿಶೇಷವಾಗಿ ಹಳ್ಳಿಗಾಡು ಪ್ರದೇಶಗಳಲ್ಲಿ ಬಹಳಷ್ಟು ರೈತರು ಯಥೇಚ್ಛವಾದ ಪ್ರಮಾಣದಲ್ಲಿ ಭೂಮಿಯನ್ನು ಹೊಂದಿದ್ದು ನೀರಾವರಿ ಸೌಲಭ್ಯ ಅಳವಡಿಸುವಲ್ಲಿ ಆರ್ಥಿಕ ಸಮಸ್ಯೆಯಿಂದ ಹಿಂದೆ ಸರಿದಿರುತ್ತಾರೆ. ಆದರೆ ಕೆಲವು ಬಂಡವಾಳ ಶಾಹಿ ಶುಂಠಿ ಕೃಷಿಕರು ಅಂತಹ ರೈತರನ್ನು ಪತ್ತೆ ಹಚ್ಚಿ ಅವರೊಡನೆ ಒಪ್ಪಂದ ಮಾಡಿಕೊಂಡು ಅಂತಹವರ ಭೂಮಿಯಲ್ಲಿ ಸಾವಿರ ಅಡಿಯಾದರೂ ಸರಿಯೇ ಕೊಳವೆ ಬಾವಿ ತೆರೆದು ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡು ಶುಂಠಿ ಬೆಳೆದು ಆ ಕೊಳವೆ ಬಾವಿ ಹಾಗೂ ಭೂಮಿಯನ್ನು ಅದೇ ರೈತರಿಗೆ ಮರಳಿಸುತ್ತಾರೆ.

ಬಳಿಕ ಆ ಕೃಷಿಕನ ಭೂಮಿಯಲ್ಲಿ ನೀರಾವರಿ ಇರುವುದರಿಂದ ಜೋಳ, ಬಾಳೆ, ಹತ್ತಿ, ಭತ್ತಗಳಂತಹ ಬೆಳೆಗಳನ್ನು ಬೆಳೆಯಲು ಮುಂದಾಗು ತ್ತಾರೆ. ಇದರಿಂದ ಎಲ್ಲೆಡೆ ಹಸಿರು ಕ್ರಾಂತಿಯಾಗಿದೆ.

ಹಿAದೆಲ್ಲಾ ಊರಿಗೊಂದು ಕೊಳವೆ ಬಾವಿ ಅಥವಾ ಹಣವಂತರ ಭೂಮಿಯಲ್ಲಿ ಮಾತ್ರ ಕೊಳವೆ ಕಂಡು ಬರುತ್ತಿತ್ತು. ಇದೀಗ ಪ್ರತಿ ಕೃಷಿಕನ ಭೂಮಿಯಲ್ಲಿ ಕೊಳವೆ ಬಾವಿ ಕಾಣಬಹು ದಾಗಿದೆ.

-ಕೆ. ಎಸ್. ಮೂರ್ತಿ,

ಕುಶಾಲನಗರ.