ವೀರಾಜಪೇಟೆ, ಏ. ೨: ಇಂದಿನ ಯುವ ಜನತೆ ರಕ್ತದಾನದ ಮಹತ್ವವನ್ನು ಅರ್ಥೆÊಸಿಕೊಂಡು ಇದರ ಬಗೆಗಿನ ಅಪನಂಬಿಕೆಗಳನ್ನು ತೊರೆದು ಸ್ವಯಂಪ್ರೇರಿತರಾಗಿ ರಕ್ತದಾನದಲ್ಲಿ ಭಾಗಿಯಾಗಬೇಕು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಆಪ್ತ ಸಮಾಲೋಚನಾ ಕೇಂದ್ರದ ಸಮಾಲೋಚಕ ಚಿಟ್ಟಿಯಪ್ಪ ಕೆ.ಟಿ. ಅಭಿಪ್ರಾಯಪಟ್ಟರು.

ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್.ಎಸ್.ಎಸ್ ಘಟಕದ ವತಿಯಿಂದ ಯುವಜನತೆಯಲ್ಲಿ ಹೆಚ್.ಐ.ವಿ./ ಏಡ್ಸ್ ಕುರಿತ ಜಾಗೃತಿ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಚಿಟ್ಟಿಯಪ್ಪ ಅವರು, ಯೌವನದ ಕ್ಷಣಿಕ ಸುಖಕ್ಕಾಗಿ ಹೆಚ್.ಐ.ವಿ./ ಏಡ್ಸ್ನಂತಹ ಮಹಾಮಾರಿಯನ್ನು ಮೈಮೇಲೆ ಎಳೆದುಕೊಳ್ಳದೆ, ಶಿಸ್ತುಬದ್ಧತೆ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ಕೆ.ಸಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುಣ-ನಡತೆಗಳೊಂದಿಗೆ ರಕ್ತದಾನ, ಹೆಚ್.ಐ.ವಿ./ ಏಡ್ಸ್ ಸಾಂಕ್ರಾಮಿಕತೆಯ ವಿಚಾರಗಳನ್ನು ತಿಳಿದು ಸಮಾಜದಲ್ಲಿಯೂ ಅದರ ಬಗ್ಗೆ ಅರಿವು ಮೂಡಿಸಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್.ಎಸ್.ಎಸ್ ಘಟಕದ ಸಂಚಾಲಕಿ ದಿವ್ಯ ಎಂ.ಬಿ. ಸೇರಿದಂತೆ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.