ಕುಶಾಲನಗರ, ಏ.೨ : ಕೊಡಗು ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳಿಗೆ ತೆರಳಲು ವಾಹನ ಸಂಚಾರ ವ್ಯವಸ್ಥೆ ಸಮರ್ಪಕವಾಗಿ ಮಾಡುವ ಸಂಬAಧ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲಾಗುವುದು ಎಂದು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ತಿಳಿಸಿದ್ದಾರೆ.

‘ಶಕ್ತಿ’ ಯಲ್ಲಿ ಬಂದ ವರದಿಗೆ ಸ್ಪಂದಿಸಿರುವ ಕುಲಪತಿಗಳು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದAತೆ ಕ್ರಮ ಕೈಗೊಳ್ಳಲು ಸಂಬAಧಿಸಿದವರಿಗೆ ಸೂಚನೆ ನೀಡಲಾಗುವುದು ಎಂದಿದ್ದಾರೆ.

ವರದಿಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ ಶುಕ್ರವಾರದಂದು ಬೆಳಗ್ಗೆ ಬಸ್ಸು ಕೆಟ್ಟು ಹೋಗಿರಲಿಲ್ಲ. ಸಿಬ್ಬಂದಿಗಳು ದಿಢೀರನೆ ಗೈರು ಹಾಜರಾದ ಕಾರಣ ಕುಶಾಲನಗರದಿಂದ ವಿಶ್ವವಿದ್ಯಾಲಯ ಕಡೆಗೆ ತೆರಳುವ ಬಸ್ಸು ಸಂಚರಿಸಲು ಸಮಸ್ಯೆ ಉಂಟಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.