ಸೋಮವಾರಪೇಟೆ, ಏ. ೨: ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೬ನೇ ಜಯಂತಿ ಅಂಗವಾಗಿ ಇಲ್ಲಿನ ಬಿ.ಟಿ.ಸಿ.ಜಿ.ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಶ್ರೀ ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ, ಕಾಲೇಜು ಆಡಳಿತ ಮಂಡಳಿ, ಇತಿಹಾಸ ಸಂಘ, ರೆಡ್ ಕ್ರಾಸ್ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಕಾಲೇಜು ಆವರಣದಲ್ಲಿ ಶಿಬಿರ ನಡೆಸಲಾಯಿತು.

ಇಲ್ಲಿನ ತಾಲೂಕು ಆಸ್ಪತ್ರೆ ವತಿಯಿಂದ ರಕ್ತದ ಗುಂಪು, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸೇರಿದಂತೆ ವಿವಿಧ ಪರೀಕ್ಷೆಗಳೊಂದಿಗೆ ವೈದ್ಯಾಧಿಕಾರಿ ಡಾ. ಶಿವಪ್ರಸಾದದೊಂದಿಗೆ ಆಪ್ತಸಮಾಲೋಚನೆ ಹಾಗೂ ವೈದ್ಯಕೀಯ ಸಲಹೆ ನೀಡಿದರು. ಈ ಸಂದರ್ಭ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಎಸ್. ಮಹೇಶ್, ಪದಾಧಿಕಾರಿಗಳಾದ ಜಯಣ್ಣ, ಶಿವಣ್ಣ, ಪ್ರಾಂಶುಪಾಲರಾದ ಜಯಲಕ್ಷಿö್ಮ ರೆಡ್ ಕ್ರಾಸ್ ವಿಭಾಗದ ಮುಖ್ಯಸ್ಥರಾದ ಪಾವನಿ, ಡಾ.ಕೃತಿಕಾ, ಆಸ್ಪತ್ರೆಯ ಸಿಬ್ಬಂದಿಗಳಾದ ವಸಂತಿ, ಸುನಿಲ್, ಭವ್ಯ ಸೇರಿದಂತೆ ಇತರರು ಹಾಜರಿದ್ದರು.