ನಾಪೋಕ್ಲು, ಏ. ೨: ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ೨೦೨೩-೨೪ ರ ಸಾಲಿನ ಮಳಿಗೆ ಹರಾಜು ಪ್ರಕ್ರಿಯೆ ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು. ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕೆÀ್ಷ ಎಚ್.ಎಸ್. ಪಾರ್ವತಿ ವಹಿಸಿದ್ದರು. ಈ ಹರಾಜಿನಲ್ಲಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಬಿಡ್ಡುದಾರರು ಪಾಲ್ಗೊಂಡಿದ್ದರು.

ಹಸಿಮೀನು ಹರಾಜಿನಲ್ಲಿ ಎರಡು ಲೈಸನ್ಸ್ಗೆ ಮೂರು ಜನ ಬಿಡ್ದುದಾರರು ಭಾಗವಹಿಸಿದ್ದು, ಒಂದು ಲೈಸೆನ್ಸ್ ರೂ. ೧೦ ಲಕ್ಷದ ೮೦೦ ಗೆ ಹಾಗೂ ಇನ್ನೊಂದು ಲೈಸೆನ್ಸ್ ೧೩ ಲಕ್ಷದ ೨೫ ಸಾವಿರ ರೂ.ಗೆ ಹರಾಜಾಗಿದೆ. ಕುರಿ ಮಾಂಸಕ್ಕೆ ಎರಡು ಲೈಸೆನ್ಸ್ ಇಡಲಾಗಿದ್ದು, ಒಂದು ಲೈಸೆನ್ಸ್ಗೆ ೧ ಲಕ್ಷದ ೩೯ ಸಾವಿರದ ೨೦೦ ರೂ., ಇನ್ನೊಂದು ೨ ಲಕ್ಷದ ೫೦ ಸಾವಿರದ ೧೦೦ ರೂ.ಗೆ ಹರಾಜಾಗಿದೆ.

ಕೋಳಿ ಮಾಂಸ ಮಾರಾಟ ಅಂಗಡಿ ತಲಾ ಒಂದಕ್ಕೆ ೫೫,೧೦೦ ರೂ. ರಂತೆ ೬ ಅಂಗಡಿಗಳಿಗೆ ಲೈಸನ್ಸ್ ಹಾಗೂ ಹಂದಿ ಮಾಂಸ ಮಾರಾಟ ಮಳಿಗೆ ಒಂದು ೨೨,೧೦೦ಕ್ಕೆ ಹರಾಜಾಯಿತು.

ಬಿಡ್ಡುದಾರರು ಯಾರು ಭಾಗವಹಿಸದೇ ಇದ್ದ ಕಾರಣ ಮಾರುಕಟ್ಟೆ ಸುಂಕ ಹಾಗೂ ವಾಹನ ನಿಲ್ದಾಣ ಸುಂಕ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಯಿತು.

ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಟಿ.ಎ.ಮಹಮ್ಮದ್, ಸದಸ್ಯರಾದ ಖುರೈಸಿ, ಕುಲ್ಲೇಟಿರ ಅರುಣ್ ಬೇಬಾ, ಅಶ್ರಫ್ ಕೆ.ವೈ, ಕೆ.ಎ. ಇಸ್ಮಾಯಿಲ್, ಶಿವಚಾಳಿಯಂಡ ಜಗದೀಶ್, ಬಿ.ಎಂ. ಪ್ರತಿಪ, ಕುಲ್ಲೇಟಿರ ಹೇಮಾವತಿ, ಬಾಳೆಯಡ ಪುಷ್ಪ, ವನಜಾಕ್ಷಿ, ಅಮೀನ, ಕೋಟೆರ ನೀಲಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಸಿಬ್ಬಂದಿ ಬೊಪ್ಪಂಡ ವೇಣು ಸುಬ್ಬಯ್ಯ, ಕುಟ್ಟಪ್ಪ, ಪೊಲೀಸ್ ಸಿಬ್ಬಂದಿ ಪ್ರಸನ್ನ, ರಾಮಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.