ಸಿದ್ದಾಪುರ, ಏ. ೨: ಗುಹ್ಯ ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ೩೬ನೇ ವರ್ಷದ ಪಾಷಣ ಮೂರ್ತಿ, ಮಂತ್ರಮೂರ್ತಿ ಮತ್ತು ೨ನೇ ವರ್ಷದ ರಕ್ತೇಶ್ವರಿ ದೇವಿಯ ಕೋಲ ಹಾಗೂ ಕೊರಗಜ್ಜನ ಕೋಲ ಮಹೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.

ಮಹೋತ್ಸವದಲ್ಲಿ ಜಿಲ್ಲೆಯ ನಾನಾ ಗ್ರಾಮಗಳಿಂದ ನೂರಾರು ಮಂದಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಹರಕೆಗಳನ್ನು ತೀರಿಸಿದರು.

ಭಕ್ತರ ನಂಬಿಕೆಗೆ ಹೆಸರುವಾಸಿಯಾಗಿರುವ ದೇವರ ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು ಎಂದು ದೇವಸ್ಥಾನದ ಮುಖ್ಯಸ್ಥರಾದ ಗೋವಿಂದ ಪೂಜಾರಿ ಅಣ್ಣು ಪೊನ್ನಪ್ಪ ಹೊನ್ನಪ್ಪ ತಿಳಿಸಿದ್ದಾರೆ.