ಮಡಿಕೇರಿ, ಏ. ೨: ವಿಧಾನಸಭಾ ಚುನಾವಣೆ ಹಿನ್ನೆಲೆ ತಾ. ೩ ರಂದು (ಇಂದು) ಜಿಲ್ಲೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಆಗಮಿಸಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.
ಅಧಿಕಾರಿಗಳು ಸೇರಿದಂತೆ ಒಟ್ಟು ೯೦ ಸಿಬ್ಬಂದಿಗಳು ಬೆಳಿಗ್ಗೆ ೯ ಗಂಟೆಗೆ ಸೋಮವಾರಪೇಟೆ ಆಗಮಿಸಿ ಬಳಿಕ ಸಂಜೆ ಸುಂಟಿಕೊಪ್ಪಕ್ಕೆ ಬರಲಿದ್ದಾರೆ.
ಈ ಸಂದರ್ಭಗಳಲ್ಲಿ ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾ ಸಶಸ್ತç ಪಡೆಯೊಂದಿಗೆ ಪ್ರಾತ್ಯಕ್ಷಿಕೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.