ನಾಪೋಕ್ಲು, ಏ. ೨: ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚೆಟ್ಟೋಳಂಡ ಕುಟುಂಬದ ವತಿಯಿಂದ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಹದಿನೈದನೇ ದಿನದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್ ಕುಲ್ಲೇಟಿರ ತಂಡ ಸೇರಿದಂತೆ ಅಚ್ಚಪಂಡ, ಮೇಕೇರಿರ, ಚೇಂದಿರ, ಇಟ್ಟಿರ, ಕರವಟ್ಟಿರ, ಕಳ್ಳಿಚಂಡ, ಪೊದಿಯೊಕ್ಕಡ, ಕೊಂಗAಡ ಚೌರೀರ(ಹೊದ್ದೂರು), ಚೆಕ್ಕೆರ, ಕಲಿಯಂಡ, ಮುರುವಂಡ, ಮುಕ್ಕಾಟಿರ(ಪುಲಿಕೋಟು), ಅಮ್ಮಣಿಚಂಡ, ಮಂಡೆಪAಡ, ನೆಲ್ಲಮಕ್ಕಡ ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿದವು.

ಮೈದಾನ ೧ರ ಅಚ್ಚಪಂಡ ಮತ್ತು ಬಿದ್ದಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಅಚ್ಚಪಂಡ ತಂಡವು ಬಿದ್ದಂಡ ತಂಡವನ್ನು ೨-೧ ಗೋಲಿನ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಮೇಕೇರಿರ ತಂಡವು ಚೀಯಕಪೂವಂಡ ತಂಡವನ್ನು ೬-೧ ಗೋಲಿನ ಅಂತರದಿAದ, ಚೇಂದಿರ ತಂಡವು ಐಚೆಟ್ಟಿರ ತಂಡವನ್ನು ೫-೩ ಗೋಲಿನ ಅಂತರದಿAದ, ಇಟ್ಟಿರ ತಂಡವು ಕೊಂಗೇಟಿರ ತಂಡವನ್ನು ೨-೦ ಗೋಲಿನ ಅಂತರದಿAದ, ಕರವಟ್ಟಿರ ತಂಡವು ಕಲ್ಯಾಟಂಡ ತಂಡವನ್ನು ೩-೦ ಗೋಲುಗಳ ಅಂತರದಿAದ, ಕಳ್ಳಿಚಂಡ ತಂಡವು ಪುಳ್ಳಂಗಡ ತಂಡವನ್ನು ೧-೦ ಗೋಲಿನ ಅಂತರದಿAದ, ಪುದಿಯೊಕ್ಕಡ ತಂಡವು ಬಾರಿಯಂಡ ತಂಡವನ್ನು ೧-೦ ಗೋಲಿನ ಅಂತರದಿAದ ಪರಾಭವಗೊಳಿಸಿತು.

ಮೈದಾನ ೨ರಲ್ಲಿ ನಡೆದ ಬೊಳ್ಳೆಪಂಡ ಮತ್ತು ಚೆಕ್ಕೇರ ತಂಡಗಳ ನಡುವಿನ ಪಂದ್ಯದಲ್ಲಿ ಚೆಕ್ಕೇರ ತಂಡವು ಬೊಳ್ಳೆಪಂಡ ತಂಡವನ್ನು ೨-೧ ಗೋಲಿನ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕಲಿಯಂಡ ತಂಡವು ಎಳ್ತಂಡ ತಂಡವನ್ನು ೧-೦ ಗೋಲಿನ ಅಂತರದಿAದ, ಮುರುವಂಡ ತಂಡವು ಅಲ್ಲಂಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿತು.

ಮೈದಾನ ೩ರಲ್ಲಿ ನಡೆದ ಮಾರ್ಚಂಡ ಮತ್ತು ಮುಕ್ಕಾಟಿರ(ಪುಲಿಕೋಟು) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡವು ಮಾರ್ಚಂಡ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಅಮ್ಮಣಿಚಂಡ ತಂಡವು ಐನಂಡ ತಂಡವನ್ನು ೫-೪ ಗೋಲುಗಳ ಅಂತರದಿAದ, ಮಂಡೇಪAಡ ತಂಡವು ಕೋದಂಡ ತಂಡವನ್ನು ೪-೧ ಗೋಲಿನ ಅಂತರದಿAದ ಮಣಿಸಿ ಮುನ್ನಡೆಯಿತು. ನೆಲ್ಲಮಕ್ಕಡ ತಂಡವು ಪಟ್ಟಡ ತಂಡವನ್ನು ೪-೧ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

-ಪಿ.ವಿ. ಪ್ರಭಾಕರ್