ಮಡಿಕೇರಿ, ಏ. ೩: ಇಲ್ಲಿಗೆ ಸನಿಹದ ಕರವಲೆ ಬಾಡಗ ಗ್ರಾಮದ ಶ್ರೀ ಭದ್ರಕಾಳಿ ಹಾಗೂ ಮೈತಾಲಪ್ಪ ದೇವರ ಉತ್ಸವ ತಾ. ೩ರಂದು ಕಟ್ಟು ಬೀಳುವುದರೊಂದಿಗೆ ಆರಂಭಗೊAಡಿದ್ದು, ತಾ. ೧೪ ರವರೆಗೆ ನಡೆಯಲಿದೆ.

ತಾ. ೪ರಂದು (ಇಂದು) ದೇವರ ಜಳಕ, ತಾ. ೫, ೬, ೭ರಂದು ಬೆಳಕು, ತಾ. ೮ರಂದು ಕಾಳೆ ಹಿಡಿಯುವುದು, ೯ರಂದು ಮಧ್ಯಾಹ್ನ ೨ ಗಂಟೆಗೆ ದೊಡ್ಡ ಹಬ್ಬ ನಡೆಯಲಿದೆ.

ತಾ. ೧೧ರಿಂದ ಮೈತಾಲಪ್ಪ ದೇವರ ಉತ್ಸವ ಆರಂಭಗೊಳ್ಳಲಿದ್ದು, ಅಂದು ದೇವರ ಜಳಕ, ತಾ. ೧೨ರಂದು ಬೆಳಕು, ೧೩ರಂದು ಕಾಳೆ ಹಿಡಿಯುವುದು, ತಾ. ೧೪ರಂದು ಮಧ್ಯಾಹ್ನ ೨ ಗಂಟೆಗೆ ದೊಡ್ಡ ಹಬ್ಬ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.