ಗೋಣಿಕೊಪ್ಪ ವರದಿ, ಏ. ೩: ಕಿರುಗೂರು ಗ್ರಾಮದ ಮಹಾದೇವರ ವಾರ್ಷಿಕೋತ್ಸವ ಐದು ದಿನ ಭಕ್ತಿಭಾವದಿಂದ ನಡೆಯಿತು. ಶನಿವಾರ ದೇವರ ತಡುಂಬು ಪ್ರದಕ್ಷಿಣೆ ಮೂಲಕ ಸಂಪನ್ನ ಗೊಂಡಿತು. ದೇವರ ನೃತ್ಯ ಬಲಿ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಿತು.
ಮಂಗಳವಾರ ಕೊಡಿಮರ ನಿಲ್ಲಿಸುವ ಆಚರಣೆ ಮೂಲಕ ಆರಂಭಗೊAಡ ಹಬ್ಬದಲ್ಲಿ ದೇವರ ಬಲಿ, ಉಷಾ ಪೂಜೆ, ನವಕಲಶ ಪೂಜೆ, ಕಲಾಭಿಷೇಕ, ತೂಚಂಬಲಿ ಪೂಜೆ, ಅಂದಿಬೊಳಕ್, ಇರ್‌ಬೊಳಕ್, ನವಕ ಕಲಶ ಪೂಜೆ, ತುಲಭಾರ, ನೆರ್ಪು, ದೇವರ ಬನದಲ್ಲಿ ವಿಶೇಷ ಪೂಜೆ, ವಸಂತ ಪೂಜೆ ಆಚರಣೆ ನಡೆಸಲಾಯಿತು. ಗ್ರಾಮದ ಭಕ್ತರು ಪಾಲ್ಗೊಂಡು ಪುನೀತರಾದರು.