ಶ್ರೀಮಂಗಲ, ಏ. ೩: ಹರಿಹರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಬಾಚಿರ ಕೊಡವ ಕೌಟುಂಬಿಕ ಪಂದ್ಯಾವಳಿಯಲ್ಲಿ ಸೋಮವಾರ ೧೧ ತಂಡಗಳು ಮುನ್ನಡೆ ಪಡೆದುಕೊಂಡವು. ನಂದೇಟೀರ (೧೭/೮) ವಿರುದ್ಧ ಕಳಕಂಡ (೫೮/೪) ತಂಡ ಗೆಲುವು ಸಾಧಿಸಿತು. ಚೆಟ್ಟೀರ ತಂಡ ಗೈರು ಹಿನೆÀ್ನಲೆ ಮಾಪಣಮಾಡ ತಂಡ ವಾಕ್ ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶಿಸಿತು. ನೆಲ್ಲೀರ (೩೫/೫) ವಿರುದ್ಧ ಮಚ್ಚಮಾಡ (೫೪/೪) ಗೆಲುವು ಸಾಧಿಸಿತು. ಕಾಡ್ಯಮಾಡ (೪೦/೨) ವಿರುದ್ಧ ಬಲ್ಯಮೀದೇರಿರ (೪೩/೧) ಗೆಲುವು ಸಾಧಿಸಿತು. ಕುಪ್ಪಣಮಾಡ (೪೭/೭) ವಿರುದ್ಧ ತೀತೀರ (ಹುದಿಕೇರಿ) (೪೮/೨) ಗೆಲುವು ಸಾಧಿಸಿತು. ಆದೇಂಗಡ (೬೬/೪) ವಿರುದ್ಧ ಮಾಣೀರ (೬೭/೪) ತಂಡ ಗೆಲುವು ಸಾಧಿಸಿತು. ಚೋಡುಮಾಡ (೩೯/೪) ವಿರುದ್ಧ ಅಳಮೇಂಗಡ (೪೧/೦) ಜಯ ಸಾಧಿಸಿತು. ಮಚ್ಚಮಾಡ (೮೨/೬ ವಿರುದ್ಧ ಮಾಪಣಮಾಡ (೩೫/೨) ಸೋಲು ಅನುಭವಿಸಿತು.
ತೀತೀರ (೪೫/೦) ಬಲ್ಯಮೀದೇರಿರ (೪೪/೨) ವಿರುದ್ಧ ಗೆಲುವು ಸಾಧಿಸಿತು. ಅಳಮೇಂಗಡ (೩೨/೧) ತಂಡ ಮಾಣೀರ (೩೧/೬) ವಿರುದ್ಧ ಗೆಲುವು ಸಾಧಿಸಿತು.
ನಂದೇಟೀರ ಜೋಯಪ್ಪ, ನೆಲ್ಲೀರ ಕವನ್, ಕಾಡ್ಯಮಾಡ ಮಧು, ಕುಪ್ಪಣಮಾಡ ತರುಣ್, ಅದೇಂಗಡ ಪ್ರಶಾಂತ್, ಚೋಡುಮಾಡ ನಿಶಾಂತ್, ಮಾಪಣಮಾಡ ಕೌಶಿಕ್, ಬಲ್ಯಮೀದೇರಿರ ಸಚಿನ್, ಮಾಣೀರ ಪೊನ್ನಪ್ಪ ಅವರು ಇಂದಿನ ಪಂದ್ಯಗಳಲ್ಲಿ ಪಂದ್ಯ ಪುರುಷ ಪ್ರಶಸ್ತಿ ಪಡೆದರು.