ಕೂಡಿಗೆ, ಏ. ೩: ಕಣಿವೆ ಗ್ರಾಮದ ಹಾಸನ ಹೆದ್ದಾರಿಗೆ ಹೊಂದಿ ಕೊಂಡAತೆ ಇರುವ ಜಮೀನಿನಲ್ಲಿ ಒಕ್ಕಲು ಮಾಡಿ ಸಂಗ್ರಹಿಸಿದ್ದ ನಾಲ್ಕು ಎಕರೆಗಳಷ್ಟು ಪ್ರದೇಶದ ಒಣ ಭತ್ತದ ಹುಲ್ಲು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

ಹುಲುಸೆ ಗ್ರಾಮದ ಹೆಚ್.ಇ. ಶಿವಣ್ಣ ಎಂಬವರಿಗೆ ಸೇರಿದ ಭತ್ತದ ಹುಲ್ಲಿನ ಮೆದೆಗೆ ಭಾನುವಾರ ಮಧ್ಯ ರಾತ್ರಿ ಬೆಂಕಿ ಬಿದ್ದಿದೆ. ಇದನ್ನು ಗಮನಿಸಿದ ಜನರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕುಶಾಲನಗರ ಅಗ್ನಿಶಾಮಕ ದಳ ಆಗಮಿಸುವಷ್ಟರಲ್ಲಿ ರೂ.೧ ಲಕ್ಷಕ್ಕೂ ಅಧಿಕ ಮೌಲ್ಯದ ಒಣ ಭತ್ತದ ಹುಲ್ಲಿನ ಮೆದೆ ಹಾಗೂ ಬೃಹತ್ ಗಾತ್ರದ ಮರದ ದಿಮ್ಮಿಗಳು ಬೆಂಕಿಗೆ ಆಹುತಿಯಾಗಿವೆ.

ಪರಿಹಾರಕ್ಕಾಗಿ ಕಂದಾಯ ಮತ್ತು ಕೃಷಿ ಇಲಾಖೆಗೆ ಮನವಿಯನ್ನು ಸಲ್ಲಿಸಲಾಗಿದೆ.