ಸುಂಟಿಕೊಪ್ಪ, ಏ. ೨: ದೇಶಾ ದ್ಯಂತ ಪಾಸ್ಖಕಾಲದ ಆಚರಣೆಯ ಅಂಗವಾಗಿ ‘ಗರಿಗಳ ಭಾನುವಾರ’ ವನ್ನು ಆಚರಣೆ ಮಾಡುವ ಮೂಲಕ ಕ್ರೆöÊಸ್ತ ಬಾಂದವರು ಮುನ್ನುಡಿಯನ್ನು ಇಟ್ಟರು. ಇಲ್ಲಿನ ಸಂತ ಅಂತೋಣಿ ಯವರ ದೇವಾಲಯದಲ್ಲಿ ಪೂಜೆ ಹಾಗೂ ಪ್ರಾರ್ಥನೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಕ್ರೆöÊಸ್ತಭಾಂದವರಿಗೆ ಕಳೆದ ೪೦ ದಿನಗಳಿಂದ ಉಪವಾಸ ವೃತಾಚರಣೆ ಯಲ್ಲಿ ತೊಡಗಿಸಿಕೊಂಡು, ಕೊನೆಯ ವಾರದ ಈ ದಿನದಲ್ಲಿ ಪವಿತ್ರ ವಾರ (ಪಾಸ್ಖಕಾಲ) ಆಚರಣೆಯ ಭಾಗವಾಗಿ ಈ ಆಚರಣೆ ನಡೆಸಲಾಯಿತು.

ಸಂತ ಅಂತೋಣಿ ದೇವಾಲ ಯದ ಧರ್ಮಗುರುಗಳಾದ ಅರುಳ್ ಸೆಲ್ವಕುಮಾರ್, ಉಪಯಾಜಕರಾದ ಚಾರ್ಲ್ಸ್ ಅವರು ಸಂತ ಮೇರಿ ಶಾಲಾ ಮೈದಾನದಲ್ಲಿ ಬೆಳಿಗ್ಗೆ ತೆಂಗಿನ ಗರಿಗಳನ್ನು ಆಶೀರ್ವಚಿಸಿ ನಂತರ ಕ್ರೆöÊಸ್ತ ಬಾಂದವರಿಗೆ ವಿತರಿಸಿದರು. ಶಾಲಾವರಣದಿಂದ ದೇವಾಲಯದ ವರೆಗೆ ಗರಿಗಳನ್ನು ಹಿಡಿದು ಪ್ರಾರ್ಥನೆ ಯೊಂದಿಗೆ ಮೆರವಣಿಗೆ ಯನ್ನು ನಡೆಸಿದರು.

ದೇವಾಲಯದಲ್ಲಿ ಬಲಿಪೂಜೆ ಯನ್ನು ಆರ್ಪಿಸುವ ಮೂಲಕ ಮುಂದಿನ ಪವಿತ್ರ ವಾರಕ್ಕೆ ಮುನ್ನುಡಿ ಇಡಲಾಯಿತು. ಸಂತ ಕ್ಲಾರ ಕನ್ಯಾಸ್ತಿçà ಕಾನ್ವೆಂಟಿನ ಕನ್ಯಾಸ್ತಿçÃಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಬಲಿಪೂಜೆ ಪ್ರಾರ್ಥನೆ ಯಲ್ಲಿ ಪಾಲ್ಗೊಂಡಿದ್ದರು.

(ಮೊದಲ ಪುಟದಿಂದ)

ನಾಪೋಕ್ಲುವಿನಲ್ಲಿ

ನಾಪೋಕ್ಲು: ಸ್ಥಳೀಯ ಮೇರಿ ಮಾತೆ ದೇವಾಲಯದಲ್ಲಿ ಗರಿಗಳ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಚರ್ಚಿನ ಧರ್ಮ ಗುರುಗಳಾದ ಜ್ಞಾನ ಪ್ರಕಾಶ್ ದಿನದ ಮಹತ್ವದ ಬಗ್ಗೆ ಮಾತನಾಡಿದ ಬಳಿಕ ಗರಿಗಳಿಗೆ ವಿಶೇಷ ಪೂಜೆಯನ್ನು ನೆರವೇರಿಸಿದರು. ಆನಂತರ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನೆರೆದ ಭಕ್ತಾದಿಗಳಿಗೆ ಗರಿಗಳನ್ನು ವಿತರಿಸಲಾಯಿತು. ಬಳಿಕ ಭಕ್ತಾದಿಗಳು ಗರಿಗಳೊಂದಿಗೆ ತಮ್ಮ ತಮ್ಮ ಮನೆಗೆ ತೆರಳಿ ಕುಟುಂಬಸ್ಥರೊAದಿಗೆ ಗರಿಗಳ ಹಬ್ಬವನ್ನು ಆಚರಿಸಿದರು.

ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.