ಕೊಡ್ಲಿಪೇಟೆ, ಏ. ೨: ಕೊಡ್ಲಿಪೇಟೆ ಸಮೀಪದ ಬೆಂಬಳೂರು ಗ್ರಾಮದ ನದಿ ದಂಡೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಗಳ ಮೇಲೆ ಕಾರ್ಯಾಚರಣೆ ನಡೆಸಿದ ಸೋಮವಾರಪೇಟೆ ಅಬಕಾರಿ ಇಲಾಖಾಧಿಕಾರಿಗಳು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ೧೦ ಲೀಟರ್ ಕಳ್ಳಭಟ್ಟಿ ಹಾಗೂ ೮೦ ಲೀಟರ್ ಪುಳಗಂಜಿಯನ್ನು ವಶಕ್ಕೆ ಪಡೆದಿದ್ದಾರೆ.
ಒಂದು ಪ್ರಕರಣಕ್ಕೆ ಸಂಬAಧಿಸಿದAತೆ ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೊಂದು ಪ್ರಕರಣದ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬೆAಬಳೂರು ಗ್ರಾಮದ ನದಿ ದಂಡೆಯಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ನಾಗೇಂದ್ರ ಎಂಬಾತನನ್ನು ವಶಕ್ಕೆ ಪಡೆದು ೧೦ ಲೀಟರ್ ಕಳ್ಳಭಟ್ಟಿ ಸೇರಿದಂತೆ ೪೦ ಲೀಟರ್ ಪುಳಗಂಜಿ ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ೪೦ ಲೀಟರ್ ಪುಳಗಂಜಿಯನ್ನು ವಶಕ್ಕೆ ಪಡೆಯಲಾಗಿದೆ.
(ಮೊದಲ ಪುಟದಿಂದ)
ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ಸೋಮವಾರಪೇಟೆ ವಲಯ ಕಚೇರಿಯ ಅಬಕಾರಿ ನಿರೀಕ್ಷಕ ಬಿ.ಎಸ್. ಲೋಕೇಶ್, ಉಪ ನಿರೀಕ್ಷಕಿ ಕೆ.ಎಸ್. ಸುಮತಿ, ಪೇದೆಗಳಾದ ಎ.ಪಿ. ವೀರೇಶ್, ಮಹಾಂತೇಶ್, ಎಚ್. ಕರಿಯಪ್ಪ, ಎಂ. ರೇವಣ್ಣ, ಚಾಲಕ ಜಿತೇಂದ್ರ ಭಾಗವಹಿಸಿದ್ದರು.