ಕುಶಾಲನಗರ, ಏ. ೨: ಕುಶಾಲನಗರದ ಹಿರಿಯ ಸಾಹಿತಿ ಬಿ.ಆರ್. ನಾರಾಯಣ ಅವರು ರಚಿಸಿದ ೬ನೇ ಕೃತಿ ಅಹಂ-ನಾನು ಸೋತೆ ಮತ್ತು ಇತರ ಕವನಗಳು ಮಕ್ಕಳ ಸಾಹಿತ್ಯ ಪುಸ್ತಕವನ್ನು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಬಿಡುಗಡೆಗೊಳಿಸಿದರು.
ಕುಶಾಲನಗರ ರಥ ಬೀದಿಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ರಾಜೇಂದ್ರ ಅವರು ನಂಬಿಕೆ, ಭಕ್ತಿ ಮೂಲಕ ದೇವರ ಆರಾಧನೆ ಮಾಡಿದಲ್ಲಿ ದೈವಶಕ್ತಿಯನ್ನು ಒಲಿಸಿಕೊಳ್ಳಲು ಸಾಧ್ಯ ಎಂದರು.
ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೆ.ಎಸ್. ರಾಜಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಉಪಸ್ಥಿತರಿದ್ದರು.
ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷ ಬಿ.ಆರ್. ಶಶಿಧರ್. ಕವನ ಸಂಕಲನದ ಕರ್ತೃ ಬಿ.ಆರ್. ನಾರಾಯಣ ಅವರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಸಂಘದ ಕಚೇರಿಯಲ್ಲಿ ರಾಮೋತ್ಸವ ಅಂಗವಾಗಿ ವೇ ಬ್ರ.ಕೆ. ಸುಬ್ಬರಾಮು ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಅನಿಲ್ ಶೇಷಾದ್ರಿ ರಾಮೋತ್ಸವ ಸಮಿತಿಯ ಕಾರ್ಯದರ್ಶಿ ಸತೀಶ್, ಪ್ರಮುಖರಾದ ಎಂ.ವಿ. ನಾರಾಯಣ ರಮಾ ವಿಜಯೇಂದ್ರ ಶರ್ಮಿಳಾ ಮಂಜುನಾಥ್, ದೀಪಿಕಾ ರಾಘವೇಂದ್ರ, ಮತ್ತಿತರರು ಇದ್ದರು.