ಮುಳ್ಳೂರು, ಏ. ೨: ಸಮೀಪದ ಆಲೂರುಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ಅಂಕನಹಳ್ಳಿ ಗ್ರಾಮದ ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಗುರುಸಿದ್ದೇಶ್ವರಸ್ವಾಮಿ ವಾರ್ಷಿಕ ಜಾತ್ರಾ ಮಹೋತ್ಸವ ತಾ. ೮ ರಂದು ನಡೆಯಲಿದೆ ಎಂದು ಶ್ರೀಕ್ಷೇತ್ರ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಅವರು ಶನಿವಾರಸಂತೆ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶ್ರೀ ಗುರುಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ತಾ. ೬ ರಿಂದ ೮ರವರೆಗೆ ಶ್ರೀಕ್ಷೇತ್ರದ ಮಠದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆಯುತ್ತವೆ. ತಾ. ೬ ರಂದು ಬೆಳಿಗ್ಗೆ ೮ ಗಂಟೆಗೆ ಧ್ವಜಾರೋಹಣ, ಸಂಜೆ ೬.೩೦ಕ್ಕೆ ಶ್ರೀಸ್ವಾಮಿಯವರಿಗೆ ಕಂಕಣ ಧಾರಣೆ, ಪೂಜೆ, ಮಹಾಮಂಗಳಾರತಿ ನಡೆಯಲಿದೆ. ತಾ. ೭ ರಂದು ಬೆಳಿಗ್ಗೆ ೮ ಗಂಟೆಗೆ ಶ್ರೀ ಮದನಾಧಿ ಅನಘ ನಿರಂಜನ ಜಂಗುಮ ಪೂಜೆ, ಸಂಜೆ ೬.೩೦ಕ್ಕೆ ಶ್ರೀಸ್ವಾಮಿಯವರ ಸೂರ್ಯ ಮಂಡ ಲೋತ್ಸವ ನಡೆಯಲಿದೆ.

ಚೈತ್ರ ಬಹುಳ ಬಿದಿಗೆ ಪ್ರಯುಕ್ತ ವಾರ್ಷಿಕ ಜಾತ್ರೋತ್ಸವ ನಡೆಯಲಿದ್ದು, ಅಂದು ಮುಂಜಾನೆ ೫ ಗಂಟೆಗೆ ಶ್ರೀ ಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಯವರ ಪ್ರೀತ್ಯರ್ಥ ದುಗ್ಗಳ ಹಾಗೂ ಅಗ್ನಿಕೊಂಡೋತ್ಸವ ಸೇವೆ, ಬೆಳಿಗ್ಗೆ ೭ ಗಂಟೆಗೆ ಶ್ರೀ ಸ್ವಾಮಿಯವರ ಸಣ್ಣ ಚಂದ್ರಮAಡಲೋತ್ಸವ, ಬೆಳಿಗ್ಗೆ ೯ ಗಂಟೆಗೆ ಶ್ರೀ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ, ಪೂರ್ವಾಹ್ನ ೧೧ ಗಂಟೆಗೆ ಶ್ರೀ ಪ್ರಸನ್ನ ತಪೋವನೇಶ್ವರಿ ಅಮ್ಮನವರ ಪ್ರೀತ್ಯರ್ಥ ಮುತ್ತೆöÊದೆ ಸೇವೆ ಮತ್ತು ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯ ನಡೆಯಲಿದೆ ಎಂದರು.

ಮಧ್ಯಾಹ್ನ ೧ ಗಂಟೆಗೆ ಶ್ರೀ ಸ್ವಾಮಿಯವರ ದೊಡ್ಡ ಚಂದ್ರಮAಡಲೋತ್ಸವ, ಸಂಜೆ ೫.೩೦ಕ್ಕೆ ಶ್ರೀಸ್ವಾಮಿಯವರ ಪ್ರಾಕಾರ ಪಲ್ಲಕ್ಕಿ ಉತ್ಸವದೊಂದಿಗೆ ಸಂಜೆ ೬.೩೦ ರಿಂದ ಶ್ರೀಕ್ಷೇತ್ರದಲ್ಲಿ ಶ್ರೀ ಸ್ವಾಮಿಯವರ ಮಹಾರಥೋತ್ಸವನ್ನು ನಡೆಸಲಾಗುತ್ತದೆ. ಸಂಜೆ ೮ ಗಂಟೆಗೆ ಶ್ರೀ ವೃಷಭಲಿಂಗೇ ಶ್ವರಸ್ವಾಮಿಯವರ ಸನ್ನಿಧಾನದಲ್ಲಿ ಮಹಾಮಂಗಳಾರತಿ ಮತ್ತು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ದೊಂದಿಗೆ ಜಾತ್ರಾಮಹೋತ್ಸವ ಕೊನೆಗೊಳ್ಳುತ್ತದೆ ಎಂದು ಸ್ವಾಮೀಜಿ ಹೇಳಿದರು.

ಶ್ರೀಕ್ಷೇತ್ರ ಟ್ರಸ್ಟಿನ ಕಾರ್ಯದರ್ಶಿ ಎಸ್.ಸಿ.ಚಂದ್ರಕಾAತ್ ಮಾತನಾಡಿ, ವಾರ್ಷಿಕ ಜಾತ್ರಾಮಹೋತ್ಸವದಲ್ಲಿ ವಿವಿಧ ಕಡೆಗಳಿಂದ ೬ ಸಾವಿರ ಭಕ್ತರು ಪಾಲ್ಗೊಳ್ಳಬಹುದೆಂಬ ನಿರೀಕ್ಷೆ ಇದ್ದು ಜಾತ್ರೋತ್ಸವ ಪ್ರಯುಕ್ತ ಮೈಸೂರು ಜಾನಪದ ವಿಶ್ವ ವಿದ್ಯಾನಿಲಯದ ಸಂಯೋಜನಾಧಿಕಾರಿ ದೇವಾನಂದ ವರಪ್ರಸಾದ್ ಅವರ ನೇತೃತ್ವದಲ್ಲಿ ೩೫ ಮಂದಿ ಕಲಾವಿದರ ತಂಡದಿAದ ಜಾನಪದ ಸಾಂಸ್ಕೃತಿಕ ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದರು.

ಗೋಷ್ಠಿಯಲ್ಲಿ ಟ್ರಸ್ಟ್ನ ಪ್ರಮುಖರಾದ ಮಲ್ಲೇಶ್, ಕೆ.ಎಚ್. ಮಂಜುನಾಥ್, ವಕೀಲ ಬಿ.ಜೆ. ದೀಪಕ್, ಎಸ್.ಟಿ. ಗೌರವ್ ಹಾಜರಿದ್ದರು.