ನಾಪೋಕ್ಲು, ಏ. ೨: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಪೊನ್ನು ಮುತ್ತಪ್ಪ ದೇವರ ವಾರ್ಷಿಕ ಉತ್ಸವವು ತಾ. ೩ ರಿಂದ ೫ ರವರೆಗೆ ನಡೆಯಲಿದೆ. ತಾ. ೩ ರಂದು ಬೆಳಿಗ್ಗೆ ಗಣಪತಿ ಹೋಮ, ರಾತ್ರಿ ೮ ಗಂಟೆಗೆ ಗುರು ಪೂಜೆ ಮತ್ತು ದೇವಿ ಪೂಜೆ. ತಾ. ೪ ರಂದು ಸಂಜೆ ೩ ಗಂಟೆಗೆ ಪೈಂಗುತ್ತಿ, ಸಂಜೆ ೬ ಗಂಟೆಗೆ ಶ್ರೀ ಮುತ್ತಪ್ಪ ದೇವರ ಕಳಸ. ಪವಿತ್ರ ಕಾವೇರಿ ನದಿಯಲ್ಲಿ ಸ್ನಾನದ ನಂತರ ಕೇರಳದ ಪ್ರಖ್ಯಾತ ಚಂಡೆಯೊAದಿಗೆ ನಾಪೋಕ್ಲು ಪೇಟೆಯ ಮುಖ್ಯ ಬೀದಿಯಲ್ಲಿ ಸನ್ನಿಧಾನಕ್ಕೆ ಆಗಮನ ಸಂಜೆ ೭.೩೦. ಗಂಟೆಗೆ ಮುತ್ತಪ್ಪ, ಕುಟ್ಟಿಚಾತ, ಗುಳಿಗ ವೆಳ್ಳಾಟಂ. ತಾ. ೫ ರಂದು ಪ್ರಾತಃಕಾಲ ಗುಳಿಗ, ಕುಟ್ಟಿಚಾತ ತೆರೆ ಬೆಳಿಗ್ಗೆ ೬ ಗಂಟೆಗೆ ತಿರುವಪ್ಪ ಮತ್ತು ಮುತ್ತಪ್ಪ ತೆರೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.