ಮಡಿಕೇರಿ, ಏ. ೧: ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ಜಾರಿಯಲ್ಲಿದ್ದ ೨ಬಿ ಶೇ.೪ರ ಮೀಸಲಾತಿಯನ್ನು ಕರ್ನಾಟಕ ಸರಕಾರ ರದ್ದುಪಡಿಸಿರುವದು ಸರಿಯಾದ ಕ್ರಮವಲ್ಲ; ಈ ಹಿಂದೆ ಇದ್ದ ರೀತಿಯಲ್ಲೇ ಯಥಾಸ್ಥಿತಿ ಮುಂದುವರೆಸಬೇಕೆAದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಭೀಮಪುತ್ರಿ ರೇವತಿರಾಜ್ ಒತ್ತಾಯಿಸಿದ್ದಾರೆ.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಎಲ್ಲಾ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಮೀಸಲಾತಿ ನೀಡಿರುವ ಸರ್ಕಾರವೇ ಮುಸ್ಲಿಂ ಸಮುದಾಯದ ಶೇ.೪ ರಷ್ಟು ಇದ್ದ ಮೀಸಲಾತಿಯನ್ನು ರದ್ದುಪಡಿಸಿ ರುವುದು ಖಂಡನೀಯ ಎಂದರು. ಒಕ್ಕಲಿಗರಿಗೆ ಮತ್ತು ಲಿಂಗಾಯಿತರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದಕ್ಕೆ ಯಾವುದೇ ತೊಡಕಿರಲಿಲ್ಲ. ಆದರೆ ಮುಸ್ಲಿಮರ ಮೀಸಲಾತಿಯನ್ನು ಕಸಿದುಕೊಂಡರೆ ಮಾತ್ರ ಈ ಎರಡೂ ಸಮುದಾಯಗಳಿಗೆ ಮೀಸಲಾತಿ ನೀಡಲು ಸಾಧ್ಯ ಎಂಬAತೆ ಮಾತನಾಡಿರುವುದು ಒಂದು ವಂಚಿತ ಸಮುದಾಯದ ವಿರುದ್ಧ ಎರಡು ಬಲಿಷ್ಟ ಸಮುದಾಯಗಳನ್ನು ಎತ್ತಿಕಟ್ಟುವಂತಹ ಕೃತ್ಯವಾಗಿದೆ ಎಂದು ಆರೋಪಿಸಿದರು.

ಧರ್ಮಾಧರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಮತ್ತು ಮೀಸಲಾತಿಯು ಬಡತನ ನಿವಾರಣಾ ಕಾರ್ಯಕ್ರಮವಲ್ಲ ಎಂಬುದು ಸಂವಿಧಾನದ ನಿರ್ದೇಶನವಾಗಿದೆ. ಆಧುನಿಕ ಶಿಕ್ಷಣದಿಂದ ದೂರ ಉಳಿಸಲ್ಪಟ್ಟಿರುವ ಮುಸ್ಲಿಮರಲ್ಲಿ ಒಕ್ಕಲಿಗರಿಗೆ ಮತ್ತು ಲಿಂಗಾಯಿತರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದಕ್ಕೆ ಯಾವುದೇ ತೊಡಕಿರಲಿಲ್ಲ. ಆದರೆ ಮುಸ್ಲಿಮರ ಮೀಸಲಾತಿಯನ್ನು ಕಸಿದುಕೊಂಡರೆ ಮಾತ್ರ ಈ ಎರಡೂ ಸಮುದಾಯಗಳಿಗೆ ಮೀಸಲಾತಿ ನೀಡಲು ಸಾಧ್ಯ ಎಂಬAತೆ ಮಾತನಾಡಿರುವುದು ಒಂದು ವಂಚಿತ ಸಮುದಾಯದ ವಿರುದ್ಧ ಎರಡು ಬಲಿಷ್ಟ ಸಮುದಾಯಗಳನ್ನು ಎತ್ತಿಕಟ್ಟುವಂತಹ ಕೃತ್ಯವಾಗಿದೆ ಎಂದು ಆರೋಪಿಸಿದರು.

ಧರ್ಮಾಧರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಮತ್ತು ಮೀಸಲಾತಿಯು ಬಡತನ ನಿವಾರಣಾ ಕಾರ್ಯಕ್ರಮವಲ್ಲ ಎಂಬುದು ಸಂವಿಧಾನದ ನಿರ್ದೇಶನವಾಗಿದೆ. ಆಧುನಿಕ ಶಿಕ್ಷಣದಿಂದ ದೂರ ಉಳಿಸಲ್ಪಟ್ಟಿರುವ ಮುಸ್ಲಿಮರಲ್ಲಿ ಆಧಾರದಲ್ಲಿ ಸಮಾಜ ಒಡೆಯುವಂತಹ ಕೀಳು ರಾಜಕೀಯ ನಡೆಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.

ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ

ಪಕ್ಷ ಸಂಘಟನೆ ದೃಷ್ಟಿಯಿಂದ ರಾಜ್ಯ ಘಟಕದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದ್ದು, ಉಸ್ತುವಾರಿ ನೀಡಲಾಗಿದೆ. ಪಕ್ಷದ ಸಿದ್ಧಾಂತದ ಬಗ್ಗೆ ಅರಿವಿರುವವರು ಪಕ್ಷ ಬಿಟ್ಟು ಹೋಗುವದಿಲ್ಲ. ಸಾಮಾಜಿಕ ನ್ಯಾಯ ಹಾಗೂ ನಾಡಿನ ಸುಭಿಕ್ಷೆಗಾಗಿ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಿಂದಲೂ ಬಿಎಸ್‌ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವದು. ಈಗಾಗಲೇ ೫೩ ಕ್ಷೇತ್ರಗಳ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಲಾಗಿದೆ. ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಜಿಲ್ಲೆಯವರೇ ಆದ ದಿವಿಲ್‌ಕುಮಾರ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ರೇವತಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದಪ್ಪ, ಮಡಿಕೇರಿ ತಾಲೂಕು ಅಧ್ಯಕ್ಷ ಹೆಚ್.ಟಿ. ಕೃಷ್ಣ, ಕಾರ್ಯಕರ್ತರಾದ ಬಿ.ಕೆ. ರವಿ, ಎ. ಸರತಂಗಮ್ಮ, ಮಾಜಿ ಉಸ್ತುವಾರಿ ಜಯಪ್ಪ ಹಾನಗಲ್ ಉಪಸ್ಥಿತರಿದ್ದರು.