ಸೋಮವಾರಪೇಟೆ, ಏ. ೧: ಮಹಿಳೆ ವಿದ್ಯಾವಂತಳಾದರೆ ಮಾತ್ರ ಶೋಷಣೆಯಿಂದ ಮುಕ್ತಳಾಗಬಹುದು. ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಯ ಮೆಟ್ಟಿಲೇರುತ್ತಿದ್ದಾಳೆ. ಹೆಣ್ಣುಮಕ್ಕಳು ಓದಿನಲ್ಲಿ ಬಹಳ ಮುಂದಿದ್ದಾರೆ ಎಂದು ಮೈಸೂರು ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಮಂಜುಳಾ ಭದ್ರೇಗೌಡ ಅಭಿಪ್ರಾಯಿಸಿದರು.

ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವರದಕ್ಷಿಣೆ ಕೊಡುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯೋಗಿಸಿ, ನೌಕರಿ ಕೊಡಿಸಿದರೆ ಆರ್ಥಿಕವಾಗಿ ಸಬಲರಾಗುತ್ತಾರೆ. ನಂತರ ಅವರ ಕನಸುಗಳು ನೆರವೇರುತ್ತವೆ ಎಂದ ಅವರು, ಮಹಿಳೆಯರನ್ನು ಗೌರವಿಸುವ ಸ್ಥಳದಲ್ಲಿ ದೇವತೆಗಳು ನೆಲೆಸಿರುತ್ತಾರೆ. ಹೆಣ್ಣು ಸಂಸಾರದ ಕಣ್ಣಾಗಿ ಪ್ರತಿನಿತ್ಯ ದುಡಿಯುತ್ತಾಳೆ. ಪುರುಷ ಶಕ್ತಿಗಿಂತ ಮಹಿಳಾ ಶಕ್ತಿ ದೊಡ್ಡದು ಎಂದರು.

ಕಾರ್ಯಕ್ರಮದಲ್ಲಿ ವೇದಿಕೆಯ ಸದಸ್ಯೆ ಚಂದ್ರಮಣಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ವೇದಿಕೆಯ ಅಧ್ಯಕ್ಷೆ ಪೂರ್ಣಿಮಾ ಗೋಪಾಲ್, ಉಪಾಧ್ಯಕ್ಷೆ ಹರಿಣಿ ಕುಶಾಲಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಕುವೆಂಪು ಪ್ರಾಥಮಿಕ ಶಾಲೆಯ ಭಾತ್ಮೀದಾರರಾದ ಚಂದ್ರಿಕಾ ಕುಮಾರ್, ವೇದಿಕೆಯ ಕಾರ್ಯದರ್ಶಿ ಆಶಾ ಯೋಗೇಂದ್ರ, ಖಜಾಂಚಿ ತನ್ಮಯಿ ಪ್ರವೀಣ್ ಇದ್ದರು. ರಾಜೇಶ್ವರಿ, ನಯನ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.