ಶ್ರೀಮಂಗಲ, ಏ. ೨: ಪೊನ್ನಂಪೇಟೆ ತಾಲೂಕು ಹರಿಹರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೈದಾನದಲ್ಲಿ ನಡೆಯುತ್ತಿರುವ ಬಾಚೀರ ಕ್ರಿಕೆಟ್ ಕಪ್ ಕೊಡವ ಕೌಟುಂಬಿಕ ಪಂದ್ಯಾವಳಿಯಲ್ಲಿ ೮ ತಂಡಗಳು ಮುನ್ನಡೆ ಸಾಧಿಸಿದವು.

ಪಂದ್ಯAಡ ಮತ್ತು ಮುಕ್ಕಾಟಿರ ತಂಡಗಳ ನಡುವಿನ ಪಂದ್ಯದಲ್ಲಿ ಪಂದ್ಯAಡ ೩೯/೬ ಗಳಿಸಿತು. ಮುಕ್ಕಾಟೀರ ೩೨/೧೦ ರನ್ ಗಳಿಸಿ ಸೋಲು ಅನುಭವಿಸಿತು. ಮುಕ್ಕಾಟೀರ ಭವನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕೊಟ್ಟಂಗಡ ಮತ್ತು ಕೆಂಜೆಯAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೆಂಜೆಯAಡ ತಂಡ ೨೫/೩ ನಿಗದಿತ ೬ ಓವರ್‌ಗಳಲ್ಲಿ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಕೊಟ್ಟಂಗಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ೨೭ ರನ್ ಗಳಿಸುವ ಮೂಲಕ ಜಯಗಳಿಸಿತು. ಕೆಂಜೆಯAಡ ಕೀರ್ತನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಪೋರಂಗಡ ಮತ್ತು ತಡಿಯಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೋರಂಗಡ ೪೩/೬ ರನ್ ಗಳಿಸಿತು. ತಡಿಯಂಗಡ ೪.೫ ಓವರ್‌ಗಳಲ್ಲಿ ೪೬/೧ ರನ್ ಗಳಿಸುವ ಮೂಲಕ ಜಯ ಸಾಧಿಸಿತು. ಪೋರಂಗಡ ಪೃಥ್ವಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಆಲೇಮಾಡ ಮತ್ತು ಓಡಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಲೇಮಾಡ ತಂಡ ೩೦/೪ ರನ್ ಗಳಿಸಿತು. ಓಡಿಯಂಡ ೩೨/೩ ರನ್‌ಗಳಿಸುವ ಮೂಲಕ ಜಯ ಸಾಧಿಸಿತು. ಆಲೇಮಾಡ ವಿಬಿನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕುಂಞAಗಡ ಮತ್ತು ಕಾಣತಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಣತಂಡ ೬೨/೩ ರನ್ ನೀಡಿತು. ಅದಕ್ಕೆ ಉತ್ತರವಾಗಿ ಕುಂಞAಗಡ ತಂಡ ೩೦/೩ ರನ್ ಗಳಿಸಿ ಸೋಲು ಅನುಭವಿಸಿತು. ಕುಂಞAಗಡ ದಯಾನ್ ಮ್ಯಾನ್ ಆಫ್ ದಿ ಮ್ಯಾಚ್ ಪಡೆದರು.

ಪಾಂಡಿಯAಡ ಹಾಗೂ ಮಲ್ಲಂಡ ತಂಡಗಳ ನಡುವಿನ ಪಂದ್ಯದಲ್ಲಿ ಪಾಂಡಿಯAಡ ತಂಡ ೬೫/೩ ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮಲ್ಲಂಡ ತಂಡ ೪೨/೨ ರನ್ ಗಳಿಸುವ ಮೂಲಕ ಸೋಲು ಅನುಭವಿಸಿತು. ಮಲ್ಲಂಡ ನಾಚಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕನ್ನಿಕಂಡ ಮತ್ತು ಕಳಕಂಡ ಪಂದ್ಯದಲ್ಲಿ ಕನ್ನಿಕಂಡ ೨೪/೧೦ ರನ್ ಗಳಿಸಿತು. ಕಳಕಂಡ ೨೫/೦ ರನ್ ಗಳಿಸಿ ವಿಜಯ ಸಾಧಿಸಿತು. ಕನ್ನಿಕÀಂಡ ಬಿಪಿನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

ಕಾಣತಂಡ ಮತ್ತು ಓಡಿಯಂಡ ಪಂದ್ಯದಲ್ಲಿ ಓಡಿಯಂಡ ೨೬/೬ರನ್ ಗಳಿಸಿತು. ಕಾಣತಂಡ ೩೨/೧ ರನ್ ಗಳಿಸಿ ವಿಜಯ ಸಾಧಿಸಿತು. ಓಡಿಯಂಡ ಮಾಚಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.