ಸಿದ್ದಾಪುರ, ಏ. ೨: ಸಮೀಪದ ಗುಹ್ಯ ನ್ಯಾಯ ಬೆಲೆ ಅಂಗಡಿಯಲ್ಲಿ ಕಳೆದ ಎರಡು ತಿಂಗಳಿನಿAದ ಪಡಿತರ ವಿತರಣೆಯಾಗದೆ ಇರುವುದರ ಬಗ್ಗೆ ಗ್ರಾಮಸ್ಥರು ದೂರು ನೀಡಿದ ಸಿದ್ದಾಪುರ, ಏ. ೨: ಸಮೀಪದ ಗುಹ್ಯ ನ್ಯಾಯ ಬೆಲೆ ಅಂಗಡಿಯಲ್ಲಿ ಕಳೆದ ಎರಡು ತಿಂಗಳಿನಿAದ ಪಡಿತರ ವಿತರಣೆಯಾಗದೆ ಇರುವುದರ ಬಗ್ಗೆ ಗ್ರಾಮಸ್ಥರು ದೂರು ನೀಡಿದ ಕಳೆದ ಕೆಲವು ತಿಂಗಳುಗಳಿAದ ನ್ಯಾಯ ಬೆಲೆ ಅಂಗಡಿಯನ್ನು ಸರಿಯಾಗಿ ತೆರೆಯದೆ ಇರುವುದರಿಂದ ನೂರಾರು ಮಂದಿ ಅಕ್ಕಿ ಲಭಿಸದೆ ವಂಚಿತರಾಗಿರುವ ಬಗ್ಗೆ ಸ್ಥಳೀಯರು ಆಹಾರ ಇಲಾಖೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ವೀರಾಜಪೇಟೆ ತಾಲೂಕು ಆಹಾರ ಪರಿವೀಕ್ಷಕಿ ಸೀನಾ ಕುಮಾರಿ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಯ ಎದುರಿಗೆ ಅಂಗಡಿ ಮಾಲೀಕರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಸದ್ಯಕ್ಕೆ ನ್ಯಾಯ ಬೆಲೆ ಅಂಗಡಿಯಲ್ಲಿ ಅಕ್ಕಿಯ ಕೊರತೆ ಇದೆ. ಸೋಮವಾರದೊಳಗೆ ಎಲ್ಲರಿಗೂ ಅಕ್ಕಿ ವಿತರಿಸಲಾಗುವುದು. ಅಂಗಡಿ ಮಾಲೀಕನಿಗೆ ಆರೋಗ್ಯ ಸಮಸ್ಯೆ ಎದುರಾಗಿದ್ದರಿಂದ ಈ ರೀತಿಯ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಸೀನಾ ಕುಮಾರಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಈ ಸಂದರ್ಭ ಸ್ಥಳೀಯರಾದ ಅಬ್ದುಲ್ ಖಾದರ್, ಹಸನ್, ಅಶ್ರಫ್, ಹನೀಫ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಇದ್ದರು.