ಮಡಿಕೇರಿ, ಏ. ೨: ಬಿಟ್ಟಂಗಾಲದ ಪ್ರಾರ್ಥನ ಮಡಪುರ ಶ್ರೀ ಮುತ್ತಪ್ಪ ದೇವಾಲಯದಲ್ಲಿ ತಾ. ೪ ಮತ್ತು ೫ ರಂದು ಮುತ್ತಪ್ಪ ತೆರೆ ಮಹೋತ್ಸವ ನಡೆಯಲಿದೆ.
ತಾ. ೪ ರಂದು ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಧಾರ್ಮಿಕ ಕಾರ್ಯ ಆರಂಭಗೊAಡು, ೯ ಗಂಟೆಗೆ ಕಣ್ಣಂಬಾಡಿ ಅಮ್ಮನ ಪೂಜೆ, ರಾತ್ರಿ ೮ ಗಂಟೆಗೆ ಮುತ್ತಪ್ಪ ವೆಳ್ಳಾಟಂ, ೯ಕ್ಕೆ ಗುಳಿಗನ್ ತೋಟ್ಟಂ ತೆರೆ, ೯.೩೦ಕ್ಕೆ ಅನ್ನದಾನ, ೧೦ ಗಂಟೆಯಿAದ ವಸುರಿಮೂಲ ತೋಟ್ಟಂ ತೆರೆ ನಡೆಯಲಿದೆ. ತಾ. ೫ರ ಬೆಳಿಗ್ಗೆ ೫ ಗಂಟೆಗೆ ಗುಳಿಗನ ತೆರೆ, ೭ ಗಂಟೆಗೆ ಮುತ್ತಪ್ಪನ್ ತಿರುವಪ್ಪನ್ ತೆರೆ, ೧೦ ಗಂಟೆಗೆ ವಸುರಿ ಮೂಲ ದೇವಕೋಲ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.