ಮಡಿಕೇರಿ, ಏ. ೨: ಫೀಲ್ಡ್ ಮಾಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಹಾಗೂ ಸೂಕ್ಷಾö್ಮಣು ಜೀವ ವಿಜ್ಞಾನ ವಿಭಾಗದ ವತಿಯಿಂದ ಪರಿಸರ, ಸಮಾಜ ಮತ್ತುಆರ್ಥಿಕತೆ ಸುಸ್ಥಿರ ನಿರ್ವಹಣೆ ಮತ್ತು ಮುಂದಿನ ಪೀಳಿಗೆಗೆ ಕೌಶಲ್ಯಾಭಿವೃದ್ಧಿ ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಅಭಿಶಿಕ್ಷಣ ಮತ್ತು ಕಾರ್ಯಾಗಾರ ತಾ.೩೧ ರಂದು ಕಾಲೇಜಿನಲ್ಲಿ ನಡೆಯಿತು.

ಬೆಂಗಳೂರಿನ ಸುಸ್ಥಿರ ನಿರ್ವಹಣಾ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಡಾ. ಕೆ.ವಿ. ಜಗನ್ ಮೋಹನ್ ರಾವ್ ಅವರು ಸುಸ್ಥಿರಾಭಿವೃದ್ಧಿ ಹಾಗೂ ಉದ್ಯೋಗಾವಕಾಶ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಬೆಂಗಳೂರಿನಗಾರ್ಡನ್ ಸಿಟಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಾಮರ್ಸ್ ಐಂಡ್ ಮ್ಯಾನೇಜ್‌ಮೆಂಟ್ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಎ. ಶ್ವೇತ ಅವರು ಕೌಶಲ್ಯವರ್ಧನೆ ಇಂದಿನ ಅಗತ್ಯತೆ ವಿಷಯದ ಕುರಿತು ಮಾಹಿತಿ ನೀಡಿದರು. ವೇಲೆಂಟಾ ಅಕಾಡೆಮಿಎ ಎಲ್‌ಎಲ್ಪಿ ನಿರ್ದೇಶಕರಾದ ಅನುರಾಧ ಅವರು ಸಂವಹನ ಕೌಶಲ್ಯಾಭಿವೃದ್ಧಿ ವಿಷಯದ ಕುರಿತು ಮಾಹಿತಿ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ. ರಾಘವ ಬಿ. ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಚಾಲಕರು ಹಾಗೂ ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಡಾ. ಗೀತಾಂಜಲಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಸಂಚಾಲಕರು ಹಾಗೂ ಸೂಕ್ಷಾö್ಮಣು ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಕೆ. ಸೌಮ್ಯ ಅವರು ವಂದಿಸಿದರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು, ಕಾಲೇಜಿನ ಬೋಧಕ ಮತ್ತು ಬೋಧಕೇತರರು ಭಾಗವಹಿಸಿದ್ದರು.