ಸುಂಟಿಕೊಪ್ಪ, ಮಾ. ೩೧: ಉಲುಗುಲಿ ಗ್ರಾಮದ ಪನ್ಯದಲ್ಲಿರುವ ಶ್ರೀ ಮಳೂರು ಬೆಳ್ಳೇರಿಕಮ್ಮ ದೇವಸ್ಥಾನ ವಾರ್ಷಿಕೋತ್ಸವ ಏ. ೩ ರಂದು ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ವಾರ್ಷಿಕೋತ್ಸವದ ಅಂಗವಾಗಿ ಏ. ೩ ರಂದು ಬೆಳಿಗ್ಗೆ ೭ ಗಂಟೆಗೆ ಮಂದನ ಮನೆಯಿಂದ ಭಂಡಾರ ಹೊರಡುವುದು, ೮ ಗಂಟೆಗೆ ದೇವರ ಸನ್ನಿಧಿಯನ್ನು ಸೇರುವುದು, ೮.೧೫ಕ್ಕೆ ದೇವರ ಬೆಳಕು, ೮.೩೦ಕ್ಕೆ ದೇವರ ಚೌಲಿಆಟ (ನರ್ತನ ಸೇವೆ), ೯ ಗಂಟೆಗೆ ದೇವರ ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಹೊರತರುವುದು, ೯.೩೦ ಗಂಟೆಗೆ ವಸಂತ ಕಟ್ಟೆಯಲ್ಲಿ ಶ್ರೀ ದೇವರ ಉತ್ಸವ ಮೂರ್ತಿಯ ಪೂಜೆ, ೧೦ ಗಂಟೆಗೆ ಉತ್ಸವ ಮೂರ್ತಿಯ ನೃತ್ಯ ಬಲಿ, ದರ್ಶನ ಬಲಿ, ೧೨ ಗಂಟೆಗೆ ದೇವರಿಗೆ ಭಂಡಾರ ಹಾಕುವುದು, ೧ ಗಂಟೆಗೆ ತೀರ್ಥ ಪ್ರಸಾದ ವಿತರಿಸಲಾಗುವುದೆಂದು ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.