ಮಡಿಕೇರಿ, ಮಾ. ೩೧: ವಿಧಾನಸಭಾ ಚುನಾವಣೆ ಘೋಷಣೆಯ ಹಿನ್ನೆಲೆಯಲ್ಲಿ ಹಾಲಿ ಜನಪ್ರತಿನಿಧಿಗಳ ಸರಕಾರಿ ವಾಹನ ಬಳಕೆ -ಕಚೇರಿಗಳೆಲ್ಲವೂ ಇದೀಗ ಬಂದ್ ಆಗಿವೆ. ವಿವಿಧೆಡೆಗಳಲ್ಲಿದ್ದ ನಾಮಫಲಕ - ಜಾಹೀರಾತು ಫಲಕ ಫ್ಲೆಕ್ಸ್ ಇತ್ಯಾದಿಗಳೆಲ್ಲವೂ ತೆರವಾಗಿವೆ. ಈ ತನಕ ಸರಕಾರಿ ವಾಹನಗಳಲ್ಲಿ ತೆರಳುತ್ತಿದ್ದವರು ವಾಹನಗಳನ್ನು ಈಗಾಗಲೇ ಹಿಂದಿರುಗಿಸಿದ್ದಾರೆ.
ರಾಜ್ಯ ಸರಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದ ಶಾಸಕ ಕೆ.ಜಿ. ಬೋಪಯ್ಯ ಪ್ರಸ್ತುತ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿದ್ದ ನಾಪಂಡ ರವಿ ಕಾಳಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರುಗಳಿಗೆ ಸರಕಾರಿ ವಾಹನ ಬಳಕೆಗೆ ಅವಕಾಶವಿದ್ದು, ಇದೀಗ ಹಿಂಪಡೆಯಲಾಗಿದೆ.