ಮಡಿಕೇರಿ, ಮಾ. ೩೧: ಎಸ್ಎಸ್ಎಲ್ಸಿ ಪರೀಕ್ಷೆ ಇಂದಿನಿAದ ಆರಂಭಗೊAಡಿದ್ದು, ಮೊದಲ ದಿನ ೧೦೯ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೩೧ ಕೇಂದ್ರಗಳಲ್ಲಿ ಇಂದು ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆದಿದೆ. ನೋಂದಾಯಿತ ೬೨೨೪ ವಿದ್ಯಾರ್ಥಿಗಳ ಪೈಕಿ ೬೧೧೫ ಮಂದಿ ಹಾಜರಾಗಿದ್ದು, ಇವರಲ್ಲಿ ೧೦೯ ಮಂದಿ ಗೈರಾಗಿದ್ದಾರೆ. ಪರೀಕ್ಷೆಗೆ ನೋಂದಣಿಯಾದ ೬೫೮೭ ಮಂದಿಯಲ್ಲಿ ಖಾಸಗಿ ಅಭ್ಯರ್ಥಿಗಳೂ ಸೇರಿದ್ದರು.
ಇವರೊಂದಿಗೆ ವಿವಿಧ ಶಾಲೆಗಳಲ್ಲಿ ಶೇ. ೭೫ ರಷ್ಟು ಹಾಜರಾತಿ ಕೊರತೆ ಇದ್ದ ಕೆಲವಾರು ವಿದ್ಯಾರ್ಥಿಗಳಿಗೂ ನಿಯಮಾನುಸಾರ ಪ್ರವೇಶಪತ್ರ ನೀಡಲಾಗಿಲ್ಲ. ಇದು ಹೊರತುಪಡಿಸಿದಂತೆ ಈ ಬಾರಿ ೬೨೨೪ ಮಂದಿಗೆ ಪರೀಕ್ಷೆ ಬರೆಯುವ ಅವಕಾಶವಿತ್ತು ಎಂದು ಡಿಡಿಪಿಐ ರಂಗಧಾಮಯ್ಯ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇಂದು ಆರಂಭಗೊAಡ ಪರೀಕ್ಷೆ ಯಾವದೇ ಗೊಂದಲಗಳಿಲ್ಲದAತೆ ನಡೆದಿರುವುದಾಗಿ ಅವರು ತಿಳಿಸಿದ್ದಾರೆ. ತಾ. ೩ ರಂದು ಗಣಿತ ಪರೀಕ್ಷೆ ನಡೆಯಲಿದೆ.