ಮಡಿಕೇರಿ, ಮಾ. ೩೧: ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಯುವ ಪೀಳಿಗೆಗೆ ನಿರಂತರ ಭೋದನೆ ಮಾಡುವದರೊಂದಿಗೆ, ಶ್ರೀ ಕೃಷ್ಣ ಸಂದೇಶದAತೆ ಸನಾತನ ಹಿಂದೂ ಧರ್ಮದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ಸಂತರು ದೇಶ ವಿದೇಶಗಳಲ್ಲಿ ಸದಾ ಶ್ರಮಿಸುತ್ತಿರುವದಾಗಿ ಶ್ರೀ ಮಠದ ಸಂತರು ಹೇಳಿದರು. ಇಂದು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಅಧಿಕಾರ ಪದಗ್ರಹಣ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಮೈಸೂರು ಮಠದ ಶ್ರೀ ಮುಕ್ತಿದಾನಂದ ಮಹಾರಾಜರು ಮಾತನಾಡಿ, ಕೊಡಗಿನ ಪೊನ್ನಂಪೇಟೆ ಆಶ್ರಮದಲ್ಲಿ ಸ್ವಾಮಿ ಶಾಂಭವಾನAದ ಮಹಾರಾಜರ ಆದಿಯಾಗಿ ಪ್ರಸ್ತುತ ಅಧ್ಯಕ್ಷ ಸ್ಥಾನಕ್ಕೆ ೧೫ನೇ ಸಂತರಾದ ಶ್ರೀ ಪರಹಿತಾನಂದ ಮಹಾರಾಜ್ ತನಕ ಅನೇಕರು ಸೇವೆ ಸಲ್ಲಿಸಿದ್ದಾಗಿ ನೆನಪಿಸಿದರು. ಶ್ರೀ ಮಠದ ಏಳಿಗೆಗೆ ಸದ್ಭಕ್ತರು ನಿರಂತರವಾಗಿ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಶ್ರೀ ಪರಹಿತಾನಂದ ಮಹಾರಾಜ್ ಕೊಡಗಿನ ಜನರ ಹಾಗೂ ಶ್ರೀ ಮಠದ ವಿಶ್ವಸ್ತರು ಎಲ್ಲಾ ರೀತಿಯ ಸಹಕಾರದೊಂದಿಗೆ ಅಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ನಿತ್ಯ ದೇವತಾ
ಕೈಂಕರ್ಯಗಳಿಗೆ ತೊಡಗಿಸಿಕೊಳ್ಳಲು ಸಲಹೆ ನೀಡಿದರು. ಬೆಂಗಳೂರಿನ ಹಲಸೂರು ಆಶ್ರಮದ ಅಧ್ಯಕ್ಷರಾಗಿರುವ ಶ್ರೀ ಬೋಧಸ್ವರೂಪಾನಂದ ಮಹಾರಾಜ್ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರ ಆಶಯದಂತೆ ಸಂತಗಣ ಸಮಾಜಮುಖಿ ಸೇವೆ ಸಲ್ಲಿಸುವ ಸಂಕಲ್ಪ ಕೈಗೊಂಡಿ ರುವುದಾಗಿ ಹೇಳಿದರು. ಈ ದಿಸೆಯಲ್ಲಿ ಶ್ರೀ ಮಠದಿಂದ ನಡೆಯುವ ನಿತ್ಯ ಉತ್ಸವ
ಹಾಗೂ ಆರತಿ ಪೂಜೆಗಳಲ್ಲಿ
ಸದ್ಭಕ್ತರು ತೊಡಗಿಸಿಕೊಂಡು ಮನೆ ಮನೆಗೆ ಸಂಸ್ಕಾರ ಪಡೆಯಬೇಕು. ಶತಮಾನದ ಹೊಸ್ತಿಲಲ್ಲಿ ಇರುವ ಪೊನ್ನಂಪೇಟೆ ಆಶ್ರಮದ ಮುನ್ನಲೆಗೆ ಹಾಗೂ ಆಶ್ರಮದ ಆಸ್ಪತ್ರೆಗೆ ಹೆಚ್ಚಿನ ಕಾಯಕಲ್ಪ
(ಮೊದಲ ಪುಟದಿಂದ) ನೀಡುವ ಬಗ್ಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪೊನ್ನಂಪೇಟೆಯಿAದ ಮಹಾರಾಷ್ಟçದ ಶ್ರೀ ಮಠ ಶಾಖೆಗೆ ನಿಯೋಜನೆಗೊಂಡಿರುವ ಶ್ರೀ ತತ್ವ ರೂಪಾನಂದ ಮಹಾರಾಜ್ ಕೊಡಗಿನ ಜನತೆಯ ಸಹಕಾರವನ್ನು ಸ್ಮರಿಸಿಕೊಂಡು ಈ ನಾಡಿನ ಭಾಷೆ ಸಂಸ್ಕೃತಿ ಆಚಾರ ಪರಂಪರೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಮಠಕ್ಕೆ ಸಂಬAಧಿಸಿದ ವಿವಿಧ ಶಾಖೆಗಳ ಸಂತರ ಉಪಸ್ಥಿತಿಯಲ್ಲಿ ವೇದಮಂತ್ರ ಪಠನ ಭಜನೆ ಕಾರ್ಯಕ್ರಮ ನಡೆಯಿತು. ವಿಶ್ವಸ್ತರ ಪರವಾಗಿ ಹಿರಿಯರಾದ ಡಾ. ಶಿವಪ್ಪ ಸಿ.ಕೆ. ಉತ್ತಪ್ಪ ಕೆ.ಪಿ. ಉತ್ತಪ್ಪ ಹಾಗೂ ಸದ್ಭಕ್ತರ ಪರವಾಗಿ ಚಿ.ನಾ. ಸೋಮೇಶ್ ಅನಿಸಿಕೆ ಹಂಚಿಕೊAಡರು. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಕೇಶವ ಕಾಮತ್ ಸೇರಿದಂತೆ ಇತರ ಪ್ರಮುಖರು ಪಾಲ್ಗೊಂಡಿದ್ದರು.
ವರದಿ : ಚಿ.ನಾ. ಸೋಮೇಶ್ಸ್ವಾಮಿ ವಿವೇಕಾನಂದರ ವಿಚಾರಧಾರೆ ತಲುಪಿಸುವ ಪ್ರಯತ್ನ