ಪೊನ್ನಂಪೇಟೆ, ಏ. ೧: ಅದ್ಧೂರಿಯಾಗಿ ನಡೆದ ಪೊನ್ನಂಪೇಟೆ ಮುತ್ತಪ್ಪ ದೇವರ ಉತ್ಸವ ಗುಳಿಗ ದೇವರಿಗೆ ಹರಕೆ ಸಲ್ಲಿಸುವುದರೊಂದಿಗೆ ಸಂಪನ್ನಗೊAಡಿತು. ಕೊಡಗಿನ ವಿವಿಧೆಡೆಯಿಂದ ಉತ್ಸವ ವೀಕ್ಷಣೆಗೆ ಸಾವಿರಾರು ಮಂದಿ ಆಗಮಿಸಿ ಕಣ್ತುಂಬಿಕೊAಡರು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದಲೂ ಭಕ್ತಾದಿಗಳು ಆಗಮಿಸಿದ್ದು ವಿಶೇಷವಾಗಿತ್ತು. ಮಾ.೨೮ ನೇ ತಾರೀಕು ಗಣಪತಿ ಹೋಮ ನಡೆಸುವುದರೊಂದಿಗೆ ಆರಂಭವಾದ ಮುತ್ತಪ್ಪ ದೇವರ ಉತ್ಸವಕ್ಕೆ ಜನ ಸಾಗರವೇ ಹರಿದು ಬಂದಿತ್ತು. ತಾ.೩೦ ರಂದು ಜೋಡಿ ವಸೂರಿ ಮಾಲಾ ವೆಳ್ಳಾಟಂ ನಲ್ಲಿ ಸಾವಿರಾರು ಜನರು ಪಾಲ್ಗೊಂಡು ಕೇಕೆ ಹಾಕಿ, ಕುಣಿದು ಸಂಭ್ರಮಿಸಿದರು. ಪೊನ್ನಂಪೇಟೆ ಗೌರಿ ಕೆರೆಯಿಂದ ಪ್ರಾರಂಭವಾದ ವಸೂರಿ ಮಾಲ ವೆಳ್ಳಾಟಂ ಮುಖ್ಯರಸ್ತೆಯ ಮೂಲಕ ಹೊರಟು ಮುತ್ತಪ್ಪ ದೇವಸ್ಥಾನ ತಲುಪಿ, ದೇವಸ್ಥಾನ ಆವರಣದಲ್ಲಿ ಚಂಡೆ ನಾದಕ್ಕೆ ಕುಣಿದು ಕುಪ್ಪಳಿಸಿತು.

೩ ದಿನಗಳ ಕಾಲ ನಡೆದ ಮುತ್ತಪ್ಪ ದೇವರ ಉತ್ಸವದಲ್ಲಿ ಮುತ್ತಪ್ಪ ದೇವರ ಪಯಂಗುತ್ತಿ ಪೂಜೆ, ಗುಳಿಗ ದೇವರ ವೆಳ್ಳಾಟಂ, ಗುರು ಕಾರಣ ವೆಳ್ಳಾಟಂ, ಮುತ್ತಪ್ಪ ದೇವರ ವೆಳ್ಳಾಟಂ, ಕುಟ್ಟಿಚಾತ ದೇವರ ವೆಳ್ಳಾಟಂ, ಮುತ್ತಪ್ಪ ದೇವರ ವೆಳ್ಳಾಟಂ, ಗುಡಿವಿರನ್ ಕಳರಿಪಯಟ್, ಮುತ್ತಪ್ಪ ದೇವರ ಕಳಿಗ ಪಾಟ್, ವಸೂರಿ ಮಾಲ ದೇವರ ವೆಳ್ಳಾಟಂ, ಭಗವತಿ ದೇವರ ವೆಳ್ಳಾಟಂ ಮತ್ತು ಕಳಸ ಪ್ರದಕ್ಷಿಣೆ, ಗುಳಿಗ ದೇವರ ಕೋಲ, ಗುರುವಿನ ಕೋಲ, ಕುಟ್ಟಿಚಾತನ್ ಮತ್ತು ಮುತ್ತಪ್ಪ ದೇವರ ತಿರುಮುಡಿ, ವಸೂರಿ ಮಾಲ ದೇವರ ಕೋಲ, ಭಗವತಿ ದೇವರ ಕೋಲ ಕಾರ್ಯಕ್ರಮಗಳು ನಡೆದವು. ಭಕ್ತಾದಿಗಳಿಗೆ ದೇವಸ್ಥಾನದ ಸಮಿತಿ ವತಿಯಿಂದ ಪ್ರಸಾದ ವಿತರಣೆ ಮಾಡಲಾಯಿತು.