ಮಡಿಕೇರಿ, ಮಾ. ೩೧: ಕಡಂದಾಳು, ಕಾಂಡನಕೊಲ್ಲಿ, ಕೊಪ್ಪತ್ತೂರು, ಹಾಲೇರಿ ಹಾಗೂ ಹೆಮ್ಮೆತ್ತಾಳು ಗ್ರಾಮದ ಸದಸ್ಯರು ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಹಾಲೇರಿ ಶ್ರೀ ಭದ್ರಕಾಳೇಶ್ವರಿ ದೇವಿಯ ಉತ್ಸವ ತಾ. ೨೮ ರಿಂದ ಆರಂಭಗೊAಡಿದ್ದು. ಏಪ್ರಿಲ್ ೧ ರಂದು ಮಧ್ಯಾಹ್ನ ೨.೩೦ ಗಂಟೆಗೆ ಕಾಳೆ ಓಡಿಸುವುದು ನಡೆಯುತ್ತದೆ.

ಏ. ೨ ರಂದು ಹಾಲೇರಿ ಶ್ರೀ ಭದ್ರಕಾಳೇಶ್ವರಿ ದೇವಿಯ ದೊಡ್ಡ ಹಬ್ಬವು ಬೆಳಿಗ್ಗೆ ೧೦ ಗಂಟೆಗೆ ಅಂಗೋಲ ಪೊಂಗೋಲದೊAದಿಗೆ ನಾಡುಹತ್ತುವುದರಿಂದ ಪ್ರಾರಂಭಗೊAಡು ಬೆಳಿಗ್ಗೆ ೧೧.೩೦ ಗಂಟೆಗೆ ಕೊಂಬಾಟ್. ಎಲ್ಲಾಟ್. ಬಿಲ್ಲಾಟ್ ಈ ಮೂರೂ ತರಹದ ಕುಣಿತಗಳು ನಡೆಯುವುದು. ಮಧ್ಯಾಹ್ನ ೧.೩೦ ಗಂಟೆಗೆ ಭಂಡಾರ ಹಾಕುವುದು, ನಂತರ ಬೊಳಕಟ್ ದೇವರು ಹೊರಗೆ ಬರುವುದು, ಬಾಳೆಸೊರೆ ಎಸೆಯುವುದು, ಕಾಯಿಗೆ ಗುಂಡು ಹೊಡೆಯುವುದು, ಕಾಳೆ ಸುತ್ತು ಬರುವುದು ನಡೆಯುವುದು.

ದೇವಿಯ ಚಿಕ್ಕ ಹಬ್ಬವು ಏ. ೩ ರಂದು ಮಧ್ಯಾಹ್ನ ೨ ಗಂಟೆಗೆ ಪ್ರಾರಂಭಗೊAಡು ೩ ತರಹದ ಕುಣಿತ, ಭಂಡಾರ ಹಾಕುವುದು, ಬಾಳೆಸೂರೆ, ಕೊಂಬು ಒಪ್ಪಿಸುವುದು ಇತ್ಯಾದಿ ಕಾರ್ಯಕ್ರಮಗಳೊಂದಿಗೆ ೭ ದಿನದ ದೇವಿಯ ಉತ್ಸವ ಜರುಗಲಿದೆ ಎಂದು ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ತಿಳಿಸಿದೆ.