ಮಡಿಕೇರಿ, ಮಾ. ೩೧: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಬಾಡಗರಕೇರಿ ಗ್ರಾಮದ ಕೀಕೋಡು-ಅಮೃತ ತೋಡು ರಸ್ತೆ ಕಾಮಗಾರಿ (ಅಂದಾಜು ರೂ. ೨.೬೦ ಕೋಟಿ) ಹಾಗೂ ಬಾಡಗರಕೇರಿ-ಬಿರುನಾಣಿ ರಸ್ತೆಯ ರೂ. ೧.೫೦ ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ತಾ. ೨೭ ರಂದು ಚಾಲನೆ ನೀಡಿದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಮಲ್ಲೇಂಗಡ ರೀನಾ, ನೆಲ್ಲೀರ ಚಲನ್, ಕುಪ್ಪುಡೀರ ಪೊನ್ನು ಮುತ್ತಪ್ಪ, ಕಾಯಪಂಡ ಮಧು ಮೋಟಯ್ಯ, ಅಣ್ಣಳಮಾಡ ರಾಯ್, ಗ್ರಾ.ಪಂ. ಸದಸ್ಯೆ ಕಾಳಿ ಮತ್ತಿತರರು ಉಪಸ್ಥಿತರಿದ್ದರು.