ವೀರಾಜಪೇಟೆ, ಮಾ. ೩೧: ವೀರಾಜಪೇಟೆ ಸಮೀಪದ ಮಗ್ಗುಲ ಗ್ರಾಮದ ವೈಪಡ ನಾಡಿನ ಇತಿಹಾಸ ಪ್ರಸಿದ್ಧ ಶ್ರೀ ಪನ್ನಂಗಾಲತಮ್ಮೆ, ಚಾಮುಂಡಿ, ಪತ್‌ಕುಟ್ಟ ಮೂರ್ತಿ, ನಡೆಕಂಡಿ ಅಯ್ಯಪ್ಪ ದೇವರ ವಾರ್ಷಿಕೋತ್ಸವ ತಾ.೯ ರಂದು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ತಾ. ೯ ರಂದು ಬೆಳಿಗ್ಗೆ ೮.೩೦ ಗಂಟೆಗೆ ಭಂಡಾರ ಹಾಗೂ ಅನ್ನದ ಬಟ್ಟಿ ದೇವಸ್ಥಾನಕ್ಕೆ ಹತ್ತಿಸುವುದು, ೧೦ ಗಂಟೆಗೆ ದೇವರು ಗದ್ದೆಗೆ ಇಳಿಯುವುದು, ೧೦.೪೫ಕ್ಕೆ ತೊಟ್ಲು ಮಗು ಹತ್ತಿಸುವುದು, ೧೨ ಗಂಟೆಗೆ ದೇವರ ದರ್ಶನ, ೧ ಗಂಟೆಗೆ ಹಾಲು ಹಣ್ಣು ಕೊಡುವುದು, ತದನಂತರ ಅನ್ನಸಂತರ್ಪಣೆ, ೩ ಗಂಟೆಗೆ ದೇವರು ಗದ್ದೆಗೆ ಇಳಿಯುವುದು, ೩.೩೦ಕ್ಕೆ ನಡೆಕಂಡಿ ಅಯ್ಯಪ್ಪ ದೇವರ ದೀಪ ತೆಗೆಯುವುದು. ೪ ಗಂಟೆಗೆ ಪೋದ ಕಳಿ, ಸಂಜೆ ೬.೩೦ ಗಂಟೆಗೆ ದೇವರ ಭಂಡಾರ ಮನೆ ಹತ್ತಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದೆ.